ಶನಿವಾರ, 7 ನವೆಂಬರ್ 2026

ಕುಸಿದು ಬಿದ್ದ ಬ್ಯಾಂಕ್ ಕಟ್ಟಡ – ನಗ, ನಗದು ದೋಚಲು ಮುಗಿಬಿದ್ದ ಜನ

Advertisement
Advertisement

ಹಣ್ಣಿನ ಲಾರಿ, ಕೋಳಿ ಲಾರಿ, ಪೆಟ್ರೋ ಲಾರಿ ಅಥವಾ ಇನ್ನಿತರ ಅಗತ್ಯ ವಸ್ತುಗಳನ್ನು ಕೊಂಡುಯ್ಯುವ ವಾಹನ ಅಪಘಾತಕ್ಕಿಡಾದಾಗ ಅದರಲ್ಲಿರುವ ವಸ್ತುಗಳನ್ನು ಬಾಚಿಕೊಳ್ಳಲು ಜನರು ಮುಗಿಬೀಳುವುದನ್ನು ನಾವು ನೋಡಿದ್ದೇವೆ. ಆದರೆ ಇದೀಗ ಬ್ಯಾಂಕ್ ಕಟ್ಟಡ ಒಂದು ಕುಸಿದಾಗ ಬ್ಯಾಂಕಿನಲ್ಲಿರುವ ಹಣವನ್ನು ಬಾಚಲು ಸಾರ್ವಜನಿಕರು ಮುಗಿಬಿದ್ದ ಘಟನೆಯೊಂದು ನಡೆದಿದೆ.

Sponsored

ಉತ್ತರ ಪ್ರದೇಶದ ಬೆಳಂಗಂಜ್‌ನಲ್ಲಿ ಕೆನರಾ ಬ್ಯಾಂಕ್‌ ಇರುವ ಹಳೆ ಕಟ್ಟಡ ಕುಸಿದು ಬಿತ್ತು. ಪಕ್ಕದಲ್ಲಿ ಮಾಲ್‌ ಒಂದರ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸುತ್ತಮುತ್ತಲಿನ ಜನರೆಲ್ಲ ಬ್ಯಾಂಕಿನಲ್ಲಿರುವ ಹಣ ಮತ್ತು ಚಿನ್ನವನ್ನು ಬಾಚಲು ಬ್ಯಾಗ್‌, ಕವರ್‌ ಹಿಡಿದು ಕುಸಿದ ಕಟ್ಟಡದತ್ತ ಧಾವಿಸಿ ಬಂದಿದ್ದಾರೆ. ಈ ವಿಚಾರ ಇದೀಗ ಸದ್ಯ ಭಾರಿ ಟೀಕೆಗೆ ಗುರಿಯಾಗಿದೆ.

Advertisement
Advertisement

ಕಟ್ಟಡ ಕುಸಿದಾಗ ಮತ್ತು ಜನರು ಬ್ಯಾಂಕಿನತ್ತ ಬರುವುದನ್ನು ಕಂಡ ಕೂಡಲೇ ಬ್ಯಾಂಕ್‌ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಬ್ಯಾಂಕ್‌ ಆವರಣದಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ. ಹೀಗೆ ಸಾರ್ವಜನಿಕರ ಹಾವಳಿಯನ್ನು ನಿಯಂತ್ರಣಕ್ಕೆ ತಂದ ಬಳಿಕ ಅವಶೇಷಗಳಿಂದ ಎಲ್ಲ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

Advertisement

ಸುಮಾರು 300 ಕೋಟಿ ರುಪಾಯಿಗಳ ವಹಿವಾಟು ನಿರ್ವಹಿಸುವ ಈ ಶಾಖೆಯ ಕೌಂಟರ್‌ಗಳಲ್ಲಿ ಮತ್ತು ಸ್ಟ್ರಾಂಗ್ ರೂಮ್‌ನೊಳಗೆ ಮೀಸಲು ಹಣ ಇತ್ತು. ಅದರಲ್ಲಿ ಸುಮಾರು 25 ಲಕ್ಷ ರುಪಾಯಿಯನ್ನು ಪೊಲೀಸ್ ರಕ್ಷಣೆಯಲ್ಲಿ ಮತ್ತೊಂದು ಶಾಖೆಗೆ ಸುರಕ್ಷಿತವಾಗಿ ವರ್ಗಾಯಿಸಲಾಗಿದೆ. ಆದರೆ ದಾಖಲೆ ಪತ್ರಗಳು ಮತ್ತು ಲಾಕರ್ ಗಳ ಕೀಗಳನ್ನು ಹುಡುಕುವುದೇ ದೊಡ್ಡ ಆತಂಕವಾಗಿದೆ. ವ್ಯಾಪಕ ಹುಡುಕಾಟಗಳ ಹೊರತಾಗಿಯೂ, ಅವುಗಳನ್ನು ಇನ್ನೂ ಪತ್ತೆ ಹಚ್ಚಿಲ್ಲ. ಗ್ರಾಹಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಹೇಗೆ ಮರಳಿ ಪಡೆಯುತ್ತಾರೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Advertisement
Advertisement