ಶನಿವಾರ, 24 ಅಕ್ಟೋಬರ್ 2026

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ! ಯಾರಿಗೆ ಯಾವ ಖಾತೆ?

D k Shivkumar

ಬೆಂಗಳೂರು; ರಾಜ್ಯ ಸರಕಾರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಖಾತೆ ಹಂಚಿಕೆಯ ಪಟ್ಟಿಯನ್ನು ಲೋಕಭವನಕ್ಕೆ ರವಾನೆ ಮಾಡಿದ್ದಾರೆ. ಹಲವು ಸುತ್ತಿನ ಚರ್ಚೆ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದ ಸಮಾಲೋಚನೆಯ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ನೂತನ ಸಚಿವರಿಗೆ ನೀಡಿರುವ ಖಾತೆಗಳ ವಿವರ ಹೀಗಿದೆ

ರಿಜ್ವಾನ್‌ ಅರ್ಷದ್‌-ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ
ಎನ್‌ ಚಲುವರಾಯಸ್ವಾಮಿ-ಕೃಷಿ ಇಲಾಖೆ
ಸಂತೋಷ್‌ ಲಾಡ್‌-ಕಾರ್ಮಿಕ ಇಲಾಖೆ
ಮಧುಬಂಗಾರಪ್ಪ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಜಮೀರ್‌ ಅಹಮದ್‌ ಖಾನ್‌-ವಸತಿ ಇಲಾಖೆ
ಲಕ್ಷ್ಮಣ್‌ ಸವದಿ-ಸಹಕಾರ ಇಲಾಖೆ
ಕೆ.ಹೆಚ್‌ ಮುನಿಯಪ್ಪ- ಸಮಾಜ ಕಲ್ಯಾಣ ಇಲಾಖೆ
ಕೆ.ಎಸ್‌.ಬಸವಂತಪ್ಪ-ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ಡಾ.ಅಜಯ್‌ ಸಿಂಗ್-ಅರಣ್ಯ ಇಲಾಖೆ
ಎಸ್‌ ಎಸ್‌ ಮಲ್ಲಿಕಾರ್ಜುನ-ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಪುಟ್ಟರಂಗ ಶೆಟ್ಟಿ-ಪಶುಸಂಗೋಪನೆ
ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ ಇಲಾಖೆ
ಹೆಚ್‌ ಸಿ ಬಾಲಕೃಷ್ಣ- ಸಣ್ಣ ನೀರಾವರಿ ಇಲಾಖೆ
ಯು ಟಿ ಖಾದರ್-ಆರೋಗ್ಯ

ಖಾತೆ ಹಂಚಿಕೆ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಲೋಕಭವನಕ್ಕೆ ಕಳುಹಿಸಿದ್ದು, ಅಧಿಕೃತ ಅನುಮೋದನೆಯ ನಂತರ ಖಾತೆ ಹಂಚಿಕೆಯಾಗಲಿದೆ.