ಸೋಮವಾರ, 26 ಅಕ್ಟೋಬರ್ 2026
Trending

ಚಾಮರಾಜನಗರದಲ್ಲಿ ‘ಟೈಗರ್ಸ್ ಆಫ್ ಜಸ್ಟೀಸ್’ ಸದ್ದು; LTT ಚಟುವಟಿಕೆ ಬಗ್ಗೆ ಹೊಸ ಅನುಮಾನ

ಚಾಮರಾಜನಗರ: ಹನೂರು ತಾಲೂಕಿನಲ್ಲಿ ನಡೆದ ಶೂಟ್‌ಔಟ್ ಪ್ರಕರಣದ ಬೆನ್ನಲ್ಲೇ ಚಾಮರಾಜನಗರದ ಗಡಿಭಾಗದಲ್ಲಿ ಕೆಲವು ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಅರಣ್ಯ ಇಲಾಖೆಯೇ ಪ್ರಮುಖ ಗುರಿಯಾಗಿದ್ದು, ವೀರಪ್ಪನ್ ಬೆಂಬಲಿಗರೆಂದು ಹೇಳಲಾಗುತ್ತಿರುವ ಕೆಲವರು ವಿವಿಧ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Sponsored

ಪುತ್ತೂರಲ್ಲಿ ರಸ್ತೆ ಅಪಘಾತ – ಯುವಕ ಹರ್ಷದ್ ನಿಧನ!!

Advertisement

ಅರಣ್ಯ ಸಿಬ್ಬಂದಿ ದಿವ್ಯಾನಂದ ಹಾಗೂ ಅಪೂರ್ವ ದಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ವೀರಪ್ಪನ್ ಹುಟ್ಟುಹಬ್ಬ ಮತ್ತು ಪುಣ್ಯತಿಥಿ ಆಚರಣೆ ನಡೆಸುವ ಕೆಲವು ಗುಂಪುಗಳು, ಹೋರಾಟಗಳ ಹೆಸರಿನಲ್ಲಿ ಜನರನ್ನು ಪ್ರಚೋದಿಸುತ್ತಿವೆ ಎನ್ನಲಾಗಿದೆ.
ಇದರ ನಡುವೆ ಚಾಮರಾಜನಗರದ ಗಡಿ ಪ್ರದೇಶಗಳಲ್ಲಿ ‘ಟೈಗರ್ಸ್ ಆಫ್ ಜಸ್ಟೀಸ್’ ಎಂಬ ಸಂಘಟನೆಯ ಚಟುವಟಿಕೆಗಳ ಬಗ್ಗೆಯೂ ತನಿಖಾ ಸಂಸ್ಥೆಗಳ ಗಮನ ಹರಿದಿದೆ. ಈ ಸಂಘಟನೆಗೆ ಎಲ್‌ಟಿಟಿಇ ಪರವಾದ ಗುಂಪುಗಳೊಂದಿಗೆ ಸಂಪರ್ಕವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಪುತ್ತೂರಲ್ಲಿ ರಸ್ತೆ ಅಪಘಾತ – ಯುವಕ ಹರ್ಷದ್ ನಿಧನ!!

ಮಾಟಳ್ಳಿ, ಸಂಗನಪಾಳ್ಯ ಸೇರಿದಂತೆ ಹನೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ರಹಸ್ಯ ಸಭೆಗಳು ನಡೆಯುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ. ಸಭೆಗಳಲ್ಲಿ ವೀರಪ್ಪನ್ ಹಾಗೂ ಎಲ್‌ಟಿಟಿಇ ನಾಯಕ ಪ್ರಭಾಕರನ್ ಅವರನ್ನು ಹೊಗಳುವ ಮೂಲಕ ಜನರನ್ನು ಪ್ರಚೋದಿಸಲಾಗುತ್ತಿದೆ ಎಂಬ ಆರೋಪಗಳಿವೆ.
ವೀರಪ್ಪನ್‌ನ ನಿಕಟ ಸಹಚರ ಸೈಮನ್ ಕುಟುಂಬದ ಸದಸ್ಯರು ಹಾಗೂ ಓರ್ವ ವಕೀಲ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿಯೂ ತನಿಖಾ ಸಂಸ್ಥೆಗಳ ಗಮನ ಸೆಳೆದಿದೆ ಎನ್ನಲಾಗಿದೆ.

ಗಡಿಭಾಗದಲ್ಲಿ ಇಂತಹ ಚಟುವಟಿಕೆಗಳ ಕುರಿತು ಸ್ಥಳೀಯವಾಗಿ ಆತಂಕ ಹೆಚ್ಚಿದ್ದು, ಪ್ರಕರಣದ ಹಿನ್ನೆಲೆ ಹಾಗೂ ಸಂಘಟನೆಗಳ ಸಂಪರ್ಕದ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.