ಶನಿವಾರ, 24 ಅಕ್ಟೋಬರ್ 2026

Car accident: ನೆಲ್ಯಾಡಿ: ಸೇತುವೆಯಿಂದ 20 ಅಡಿ ಕಂದಕಕ್ಕೆ ಉರುಳಿ ಬಿದ್ದ ಕಾರು! 6 ಮಂದಿಗೆ ಗಂಭೀರ ಗಾಯ!

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಿರು ಸೇತುವೆಯಿಂದ ಉರುಳಿ ಬಿದ್ದ ಘಟನೆಯೊಂದು ಶನಿವಾರ ಬೆಳಿಗ್ಗೆ ನಡೆದಿದೆ. ಈ ಘಟನೆ ನೆಲ್ಯಾಡಿಯ ಸಮೀಪ ಎಂಜಿರದಲ್ಲಿ ನಡೆದಿದೆ.

Car accident

Car accident: ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಿರು ಸೇತುವೆಯಿಂದ ಉರುಳಿ ಬಿದ್ದ ಘಟನೆಯೊಂದು ಶನಿವಾರ ಬೆಳಿಗ್ಗೆ ನಡೆದಿದೆ. ಈ ಘಟನೆ ನೆಲ್ಯಾಡಿಯ ಸಮೀಪ ಎಂಜಿರದಲ್ಲಿ ನಡೆದಿದೆ. ಕಾರು ಸರಿ (Car accident) ಸುಮಾರು 20 ಅಡಿ ಆಳಕ್ಕೆ ಬಿದ್ದಿದೆ. ಈ ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಳಿ ಬೆಂಗಳೂರಿನಿಂದ ಶ್ರೀಕ್ಷೇತ್ರಕ್ಕೆ ಸುಬ್ರಹ್ಮಣ್ಯ ಭೇಟಿಗೆಂದು ಬಂದಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಎನ್ನಲಾಗಿದೆ.

ಈ ಘಟನಾ ಸಂದರ್ಭದಲ್ಲಿ ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ಎರಡು ವರ್ಷದ ಮಗುವೊಂದು ಇದ್ದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪ್ರಾಥಮಿಕ ತನಿಖೆ ಸಂದರ್ಭ ಗಾಯಾಳುಗಳು ಬೆಂಗಳೂರಿನ ಆರ್‌.ಟಿ ನಗರ ನಿವಾಸಿಗಳೆಂದು ಹೇಳಲಾಗಿದೆ.

ಈ ಘಟನಾ ಸಂದರ್ಭದಲ್ಲಿ ಇಬ್ಬರು ಪುರುಷರು, ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ.

 

ಇದನ್ನು ಓದಿ: Prabhas: ನಟ ಪ್ರಭಾಸ್ ಸಿನಿಮಾದಲ್ಲಿ ಸಕ್ಸಸ್, ಆದರೆ ಎಜುಕೇಶನ್ ಎಷ್ಟು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ! 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ