ಸೋಮವಾರ, 26 ಅಕ್ಟೋಬರ್ 2026
Trending

ಮೈಸೂರು ದಸರಾದಿಂದ ‘ಕ್ಯಾಪ್ಟನ್ ಅಭಿಮನ್ಯು’ ಔಟ್!!

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯ ಗಜಪಡೆಯಲ್ಲಿ ಈ ಬಾರಿ ಕ್ಯಾಪ್ಟನ್ ಅಭಿಮನ್ಯುವಿಗೆ ಕೋಕ್ ನೀಡಲಾಗಿದೆ. 

Sponsored

ಹೌದು, ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ‘ಕ್ಯಾಪ್ಟನ್’ ಅಭಿಮನ್ಯು, 2026ರ ದಸರಾ ಆನೆಗಳ ಪಟ್ಟಿಯಿಂದ ಹೊರಗುಳಿದಿದ್ದಾನೆ. ಅಭಿಮನ್ಯುವಿಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ನಿಯಮಾವಳಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಆತನಿಗೆ ವಿಶ್ರಾಂತಿ ನೀಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ.

ಅಂಬಾರಿ ಹೊರುವುದು ಯಾರು?

ಮೈಸೂರು ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅಭಿಮನ್ಯು ಆನೆಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಧನಂಜಯ, ಮಹೇಂದ್ರ, ಸುಗ್ರೀವ ಅಥವಾ ಪ್ರಶಾಂತ ಈ 4 ಆನೆಗಳ ಪೈಕಿ 1 ಈ ಬಾರಿ ತಾಯಿ ಚಾಮುಂಡಿ ಇರುವ ಚಿನ್ನದ ಅಂಬಾರಿಯನ್ನು ಹೊರಲಿದೆ.