ಕಾಸರಗೋಡು: ಕೇರಳದಿಂದ ಯುಪಿಎಸ್ಸಿ ಸಿವಿಲ್ ಪರೀಕ್ಷೆ ಬರೆದು ಉತ್ತೀರ್ಣರಾದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಶ್ರೀಧನ್ಯಾ ಸುರೇಶ್ ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿದ್ದಾರೆ.


ಶ್ರೀ ಧನ್ಯಾ, ಕೇರಳದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ವಯನಾಡ್ ಜಿಲ್ಲೆಯ ಸಮೀಪದ ಪೊಝುತಾನಾ ಅಂಬಲಕ್ಕೊಲ್ಲಿ ಎಂಬ ಗ್ರಾಮದವರು. ಆಕೆ ಕುರಿಚಿಯಾ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು ಆಕೆಯ ತಂದೆ ಸುರೇಶ್ ಮತ್ತು ತಾಯಿ ಕಮಲಾ ಇಬ್ಬರೂ ದಿನಗೂಲಿ ಕಾರ್ಮಿಕರಾಗಿದ್ದರು. ಕಡುಬಡತನದ ನಡುವೆಯೂ ಪೋಷಕರು ಶ್ರೀಧನ್ಯಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. 2019ರ ತಂಡದ ಐಎಎಸ್ ಅಧಿಕಾರಿಯಾಗಿರುವ ಶ್ರೀಧನ್ಯಾ ಕೋಝಿಕೋಡು ಸಹಾಯಕ ಆಡಳಿತ ಸೇವೆ ಜಿಲ್ಲಾಧಿಕಾರಿಯಾಗಿ ಆರಂಭಿಸಿ, ಇದೀಗ ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದಾರೆ.