ಆಗಸ್ಟ್ 28 ಅಂದರೆ ನಿನ್ನೆ ದೇಶಾದ್ಯಂತ ಇಲ್ಲ ಸಹೋದರ, ಸಹೋದರಿಯರು ರಕ್ಷಾಬಂಧನವನ್ನು ಆಚರಿಸಿದ್ದಾರೆ. ಅಕ್ಕವ ತಂಗಿಯರು ತಮ್ಮ ಸಹೋದರರಿಗೆ ರಕ್ಷಾಬಂಧನವನ್ನು ಕಟ್ಟಿ, ಜೀವನ ಪರ್ಯಂತ ತಮ್ಮ ಬಂಧ ಹೀಗೆ ಇರಲಿ, ಕೊನೆಯ ತನಕ ನಮಗೆಲ್ಲ ಶ್ರೀರಕ್ಷೆಯಾಗಿರುವ ಎಂದು ಕೇಳಿಕೊಂಡಿದ್ದಾರೆ. ಹೀಗೆ ರಕ್ಷಾ ಬಂಧನ ಕಟ್ಟಿದ ಸಹೋದರಿಯರಿಗೆ ಸಹೋದರರು ಏನಾದರೂ ಉಡುಗೊರೆ ಕೊಡುವುದು ಸಾಮಾನ್ಯ. ಕೆಲವರು ಹಣವನ್ನ ಕೊಟ್ಟರೆ ಮತ್ತೆ ಕೆಲವರು ವಿಶೇಷ ರೀತಿ ಉಡುಗೊರೆಗಳನ್ನು ತಂದು ತಮ್ಮ ಸಹೋದರಿಯರನ್ನು ಸಂತೋಷಪಡಿಸುತ್ತಾರೆ. ಆದರೆ ಇನ್ನೊಬ್ಬ ಉದ್ಯಮಿ ಅಣ್ಣ ತನ್ನ ತಂಗಿ ರಾಕಿ ಕಟ್ಟಿದ್ದಕ್ಕಾಗಿ ಕೊಟ್ಟ ಉಡುಗೊರೆ ಬಗ್ಗೆ ಕೇಳಿದರೆ ನೀವೇ ಶಾಕ್ ಆಗುತ್ತೀರಿ.
Sponsoredಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿರೋದು, ಉದ್ಯಮಿಯಾಗಿರುವ ಅಣ್ಣನೊಬ್ಬ ತನ್ನ ತಂಗಿಗೆ, ಸುಮಾರು ಐದು ಕೋಟಿ ರೂಪಾಯಿ ಬೆಲೆ ಬಾಳುವ Maserati MC20 luxury sports car ಉಡುಗೊರೆಯಾಗಿ ನೀಡಿದ್ದಾನೆ ಎನ್ನುವುದಕ್ಕೆ. ಜಾಲತಾಣದಲ್ಲಿ ವೈರಲ್ ಆಗ್ತಿರೋ ಈ ಸುದ್ದಿಯಲ್ಲಿ, ರಕ್ಷಾ ಬಂಧನದಂದು, ರಾಕೇಶ್ ಕುಮಾರ್ ಎಂಬ ಉದ್ಯಮಿ ತನ್ನ ಸಹೋದರಿಗೆ ಅವಳು ಎಂದಿಗೂ ನಿರೀಕ್ಷಿಸದ ಅಚ್ಚರಿಯನ್ನು ನೀಡಿದ್ದಾಳೆಂದು ವರದಿಯಾಗಿದೆ.
ಸಂಬಂಧಿಸಿದ ಒಂದಷ್ಟು ಫೋಟೋಗಳನ್ನು ಶೇರ್ ಮಾಡಲಾಗಿದೆ. ಆದರೆ ಇದು ಎಲ್ಲಿಯದ್ದು, ಇದರ ಸತ್ಯಾಸತ್ಯತೆ ಮಾತ್ರ ಬಹಿರಂಗಗೊಳ್ಳಲಿಲ್ಲ. ಇದು ನಿಜವೋ, ಎಐ ಸೃಷ್ಟಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಜಾಲತಾಣದಲ್ಲಂತೂ ಸಾಕಷ್ಟು ಹವಾ ಕ್ರಿಯೇಟ್ ಮಾಡುತ್ತಿದೆ ಈ ಉಡುಗೊರೆ! ಕೆಲವರು ಈತ ಯಾರು ಇರಬಹುದು ಎಂದು ತಡಕಾಡುತ್ತಿದ್ದಾರೆ. ನಮಗೂ ಇಂಥ ಅಣ್ಣ ಇರಬಾರದಿತ್ತೆ ಎಂದು ಕೆಲವು ಹೆಣ್ಣುಮಕ್ಕಳು ಕಮೆಂಟ್ ಮಾಡುತ್ತಿದ್ದಾರೆ.




