ಸೋಮವಾರ, 26 ಅಕ್ಟೋಬರ್ 2026
Trending

ಲಾವಣ್ಯ ಹಂತಕ ಚೇತನ್ ಬಂಧನಕ್ಕೆ ನೇರವಾಗಿದ್ದೇ ಈ ಕಾರ್ಮಿಕ ಗಿರೀಶ್ – ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ!!

ದಕ್ಷಿಣ ಕನ್ನಡ ಜಿಲ್ಲೆಯ ಬಿ. ಸಿ. ರೋಡ್‌ನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಜು. 16ರಂದು ನಡೆದ ಲಾವಣ್ಯಾ ಕೊಲೆ ಪ್ರಕರಣದ ಆರೋಪಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಆರೋಪಿಯ ಪತ್ತೆ ಹಚ್ಚುವಲ್ಲಿ ನೇರವಾಗಿದ್ದು ಮಾತ್ರ ಈ ಸ್ಥಳೀಯ ಕೂಲಿ ಕಾರ್ಮಿಕ ಯುವಕ ಗಿರೀಶ್. ಈಗ ಈತ ತೋರಿಸಿದ ಅಸಾಧಾರಣ ಧೈರ್ಯ ಮತ್ತು ಸಾಹಸಮಯ ಕೆಲಸ ಇದೀಗ ಎಲ್ಲೆಡೆ ಪ್ರಸಂಶೆಗೆ ಪಾತ್ರವಾಗಿದೆ.

Sponsored

ಯುವತಿಯ ಕೊಲೆಗೈದ ಬಳಿಕ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದ ಚೇತನ್ ಮಂಗಳೂರಿನತ್ತ ಆಗಮಿಸಿ, ವಾಮಂಜೂರು ತಲುಪಿದ್ದ. ಯುವಕ ಬಳಸಿದ್ದ ಆಲ್ಟೋ ಕಾರು ರಾತ್ರಿ ವೇಳೆ ಪಚ್ಚನಾಡಿಯಲ್ಲಿ ತಿರುಗಾಡುತ್ತಿತ್ತು. ರಾತ್ರಿ ಪೂರ್ತಿ ಇಲ್ಲೇ ಎಲ್ಲೋ ಕಾರಿನಲ್ಲೇ ಮಲಗಿದ್ದಿರಬೇಕು ಎಂದು ಡಂಪಿಂಗ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಬಳಿಕ ಗಿರೀಶ್ ಮಾಡಿದ ಕೆಲಸಕ್ಕೆ ಇದೀಗ ಎಲ್ಲರೂ ಶಭಾಷ್ ಎನ್ನುತ್ತಿದ್ದಾರೆ.

ಗಿರೀಶ್ ಹೇಳಿದ್ದೇನು?

ಶುಕ್ರವಾರ ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ಬಳಿ ಇರುವ ಅಂಗಡಿಯ ಎದುರು ಕಾರೊಂದು ಬಂದು ನಿಂತಿತು. ನಾನು ಅಂಗಡಿಯ ಸಿಮೆಂಟ್ ಹಾಸಿನ ಮೇಲೆ ಮೊಬೈಲ್ ನೋಡುತ್ತ ಕುಳಿತ್ತಿದ್ದೆ. ನಿಂತಿದ್ದ ಕಾರಿನತ್ತ ದೃಷ್ಟಿ ಹರಿಸಿದಾಗ, ಅದಾಗಲೇ ಮೊಬೈಲ್‌ನಲ್ಲಿ ಕಂಡಿದ್ದ ಲಾವಣ್ಯಾಳನ್ನು ಕೊಚ್ಚಿ ಕೊಲೆಗೈದಿದ್ದ ಚೇತನ್‌ನಂತೆ ಕಾರಿನ ಚಾಲಕ ಕಂಡು ಬಂದ. ತಕ್ಷಣ ಜಾಗೃತನಾಗಿ ಕಾರಿನ ಬಳಿ ಹೋಗಿ, ವಿಚಾರಿಸಲು ಪ್ರಯತ್ನಿಸಿದಾಗ ಅರ್ಧಕ್ಕೆ ಕಾರಿನ ಗ್ಲಾಸ್ ತೆರೆದ. ”ನಿನಗೆ ಏನಾಗಬೇಕು ಎಂದು ಪ್ರಶ್ನಿಸಿದಾಗ, ”ಬಿ. ಸಿ. ರೋಡ್‌ನಲ್ಲಿ ಯುವತಿಯ ಕೊಲೆಗೈದ ಕೊಲೆಗಾರ ನೀನೇ ಅಲ್ಲವೇ” ನೇರವಾಗಿ ಪ್ರಶ್ನಿಸಿದೆ. ಆಗ ಆತ ಸಂಪೂರ್ಣ ಒತ್ತಡಕ್ಕೆ ಸಿಲುಕಿದವನಂತೆ ಕಂಡು ಬಂದ ಎಂದು ಚೇತನ್‌ನ್ನು ಬಂಧಿಸುವಲ್ಲಿ ಸಹಕರಿಸಿದ ಗಿರೀಶ್ ಹೇಳಿದ್ದಾರೆ.

ಅಲ್ಲದೆ ಕಾರಿನಲ್ಲಿದ್ದವ ಚೇತನ್ ಎಂಬುದು ದೃಢಪಡುತ್ತಲೇ ಆತನ ಹಿಡಿದು ಹೊರಗೆಳೆಯಲು ಪ್ರಯತ್ನಿಸಿದೆ. ಮೊದಲಿಗೆ ಹೊರಗೆ ಬಾರದ ಆತ ನಂತರ ಕಾರಿನಿಂದ ಹೊರಬಂದು ಮುಖ ವಾಶ್ ಮಾಡಲಿಕ್ಕಿದೆ ಎಂದು ಹೇಳಿ ಹತ್ತಿರದ ಜಾಗಕ್ಕೆ ಹೋದ. ಬಳಿಕ ಕಾರಿನತ್ತ ಬಂದು ಕಾರು ಚಲಾಯಿಸಲು ಪ್ರಯತ್ನಿಸಿದ. ಕಾರಿನ ಕೀ ಕಸಿದುಕೊಳ್ಳಲು ಮುಂದಾದಾಗ ಆತ ತಡೆಯೊಡ್ಡಿದ. ಒಂದಷ್ಟು ಹೊತ್ತಿನಲ್ಲೇ ಆತನ ಕೈಯಿಂದ ಕಾರಿನ ಕೀ ಕಸಿದುಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಆತ ಸಣ್ಣ ಬಾಟಿಲಿ ತೆಗೆದು ಏನೋ ಕುಡಿದ. ಆಗ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಲು ನಾನು ಸ್ಥಳೀಯರ ನೆರವು ಕೇಳಿದ್ದಲ್ಲದೆ, ಪೊಲೀಸರಿಗೆ ಕರೆ ಮಾಡಿದ್ದೆ. ಸ್ಥಳದಲ್ಲಿದ್ದ ಇತರರೂ ಪೊಲೀಸರಿಗೆ ಕರೆ ಮಾಡಿದರು. ಸುಮಾರು ಅರ್ಧ ತಾಸಿನೊಳಗೆ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಆರೋಪಿ ಚೇತನ್‌ನ್ನು ಸೆರೆ ಹಿಡಿದು ಜೀಪಿನಲ್ಲಿ ಕೊಂಡೊಯ್ದಿದ್ದಾರೆ ಎಂದು ಗಿರೀಶ್ ಮಾಹಿತಿ ನೀಡಿದರು.

ಅಲ್ಲದೆ, ಕಾರಿನ ಕೀ ಕಿತ್ತುಕೊಳ್ಳುವಾಗ ಆತ ಕಾರಿನಲ್ಲಿದ್ದ ಚೂರಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ. ನಾನು ನೋಡಿದಾಗ ಕಾರಿನಲ್ಲಿ ಎರಡು ಚೂರಿಗಳಿದ್ದವು. ನಂತರ ನಾನದನ್ನು ಆತನ ಕೈಗೆ ಸಿಗದಂತೆ ಹಿಂದೆ ತಳ್ಳಿದೆ. ಬಳಿಕ ಬಂದ ಪೊಲೀಸರು ನಾವು ಇದುವರೆಗೂ ಪ್ರಯತ್ನಿಸಿದರು ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ನಿನ್ನ ಈ ಕಾರ್ಯದಿಂದ ನಾವು ಈತನನ್ನು ಬಂಧಿಸಲು ಸುಲಭವಾಯಿತು. ನಿನ್ನ ಧೈರ್ಯ ಮೆಚ್ಚುವಂತದ್ದು ಎಂದು ಧನ್ಯವಾದಗಳನ್ನು ತಿಳಿಸಿ ತೆರಳಿದರು ಎಂದು ಗಿರೀಶ್ ತಿಳಿಸಿದ್ದಾರೆ.