ಭಾನುವಾರ, 25 ಅಕ್ಟೋಬರ್ 2026
Trending

Kargil bomb: 24 ವರ್ಷಗಳ ನಂತರ ಸ್ಪೋಟಗೊಂಡ ಕಾರ್ಗಿಲ್ ಯುದ್ಧದ ಬಾಂಬ್ ! ಓರ್ವ ಬಾಲಕ ಸಾವು!

ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಟ್ಟಿದ್ದ ಬಾಂಬ್ ಒಂದು ಅಂದು ಸ್ಪೋಟಗೊಳ್ಳದೆ ಇದೀಗ ಸ್ಪೋಟಗೊಂಡು ಓರ್ವ ಬಾಲಕ ಮೃತಪಟ್ಟ ಘಟನೆ ನಡೆದಿದೆ.

Bomb of Kargil War

Bomb of Kargil War : ಪ್ರಕೃತಿ ಒಂದು ಅಚ್ಚರಿ ಅನಿಸಿದರೆ, ಕೆಲವೊಮ್ಮೆ ಮಾನವ ನಿರ್ಮಿತ ವಸ್ತುಗಳು ಕೂಡ ಸಾಕಷ್ಟು ಆಶ್ಚರ್ಯವನ್ನು ಉಂಟುಮಾಡುತ್ತದೆ. ಅಂತೆಯೇ ಇದೀಗ ನಡೆದ ಘಟನೆ ಹೀಗೂ ನಡೆಯಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕದೆ ಇರುವುದಿಲ್ಲ. ಯಾಕೆಂದರೆ 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಟ್ಟಿದ್ದ ಬಾಂಬ್ (Bomb of Kargil War) ಒಂದು ಅಂದು ಸ್ಪೋಟಗೊಳ್ಳದೆ ಇದೀಗ ಸ್ಪೋಟಗೊಂಡು ಓರ್ವ ಬಾಲಕ ಮೃತಪಟ್ಟ ಘಟನೆ ನಡೆದಿದೆ.

Sponsored

ಹೌದು, 1999ರ ಕಾರ್ಗಿಲ್ ಯುದ್ಧದ (1999 Kargil war) ಸಂದರ್ಭದಲ್ಲಿ ಸ್ಫೋಟಗೊಂಡಿರದ ಬಾಂಬ್‌ ಒಂದು ಇತ್ತೀಚೆಗೆ ಸ್ಫೋಟಗೊಂಡ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ಲಡಾಖ್‍ನ (Ladakh) ಕುರ್ಬಥಾಂಗ್‍ನ (Kurbathang) ಫುಟ್‍ಬಾಲ್ ಮೈದಾನ (Football Ground) ಒಂದರಲ್ಲಿ ನಡೆದಿದ್ದು ನೆರೆಹೊರೆಯವರಲ್ಲಿ ಆತಂಕ ಮೂಡಿಸಿದೆ.

ಘಟನೆಯ ಹಿನ್ನೆಲೆ ಏನೆಂದು ನೋಡುವುದಾದರೆ ಪಾಶ್ಕುಮ್‍ನ (Pashkum) ಖಾರ್ಜಾಂಗ್‍ನ (Kharzong) ನಿವಾಸಿಗಳಾದ ಅಲಿ ನಕಿ, ಮುಂತಜೀರ್ ಮೆಹದಿ ಮತ್ತು ಬಾಕಿರ್ ಎಂಬ ಮೂರು ಬಾಲಕರು ಫುಟ್ಬಾಲ್ ಮೈದಾನಕ್ಕೆ ಹೋಗುತ್ತಿದ್ದರು. ಆ ವೇಳೆ ಓರ್ವ ಬಾಲಕ ಬಾಂಬ್ ಮೇಲೆ ಎಡವಿ ಬಿದ್ದಿದ್ದಾನೆ. ಪರಿಣಾಮ ಬಾಂಬ್ ಸ್ಪೋಟಗೊಂಡು (Bomb Explosion) ಬಾಕಿರ್ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಬಾಲಕರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಶ್ಕುಮ್‍ನ ಕೌನ್ಸಿಲರ್ (Councillor) ಕಚೋ ಮೊಹಮ್ಮದ್ ಫಿರೋಜ್ ಹೇಳಿದ್ದಾರೆ.

ಅಂದಹಾಗೆ ಗಾಯಗೊಂಡಿರುವ ಮಕ್ಕಳಲ್ಲಿ ಒಬ್ಬ ಅಪಾಯದಿಂದ ಪಾರಾಗಿದ್ದು, ಇನ್ನೊಬ್ಬ ಬದುಕುಳಿಯುವ ಸಾಧ್ಯತೆ ಇದೆ. ಮೃತನ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.

ಇನ್ನು ಕಾರ್ಗಿಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮದ್ದುಗುಂಡುಗಳನ್ನು ಶೀಘ್ರದಲ್ಲಿ ಬೇರೆಡೆ ಸ್ಥಳಾಂತರಿಸುತ್ತೇವೆ ಎಂದು ಲಡಾಖ್‍ನ ಲೆಫ್ಟಿನೆಂಟ್ ಗವರ್ನರ್ ಬಿ.ಡಿ ಮಿಶ್ರಾ ಹೇಳಿದ್ದಾರೆ.

ಇದರೊಂದಿಗೆ ಈ ಘಟನೆಯು ಸುತ್ತ ಮುತ್ತಲಿನ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಜೊತೆಗೆ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮೈದಾನಗಳಲ್ಲಿ ಆಡುವ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಮೂಡುತ್ತಿದೆ. ಸ್ಫೋಟಗೊಳ್ಳದ ಬಾಂಬ್‍ಗಳನ್ನು ತೆರವುಗೊಳಿಸಲು ಮತ್ತು ನಿವಾಸಿಗಳ ಸುರಕ್ಷತೆಗಾಗಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

 

ಇದನ್ನು ಓದಿ : Nita Ambani: ನೀತಾ ಅಂಬಾನಿ ಹ್ಯಾಂಡ್‌ಬ್ಯಾಗ್‌, ನೆಕ್ಲೇಸ್ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ!!

Comments are closed.