ಮೂಲತಃ ಹಿಂದೂ ಧರ್ಮದವರಾಗಿದ್ದ ಆಯುಷ್ ಮಲಿಕ್ ಎಂಬವರು ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ಮೊಹಮ್ಮದ್ ಅಲಿ’ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರ. ಆದರೆ, ತಮ್ಮ ಮತಾಂತರದಿಂದ ಪೋಷಕರಿಗೆ ಉಂಟಾದ ತೀವ್ರ ನೋವನ್ನು ನೋಡಿ ಹಾಗೂ ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ತೊರೆದು ಮರಳಿ ಹಿಂದೂ ಧರ್ಮಕ್ಕೆ (ಸನಾತನ ಧರ್ಮ) ಮರಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Sponsoredಶಾಮ್ಲಿ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ದಯಾನಂದ ನಗರದ ನಿವಾಸಿಯಾದ ಆಯುಷ್ ಮಲಿಕ್, ಕೆಲವು ದಿನಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ಮೊಹಮ್ಮದ್ ಅಲಿ’ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಗಡ್ಡ ಬೆಳೆಸಿ, ಕೂದಲು ಬಿಟ್ಟು ಇಸ್ಲಾಮಿಕ್ ಸಾಂಪ್ರದಾಯಿಕ ಉಡುಗೆ ತೊಟ್ಟು, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಹೊರಬಂದಾಗ ಇಡೀ ಉತ್ತರ ಪ್ರದೇಶವೇ ಬೆಚ್ಚಿಬಿದ್ದು ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಈ ಬೆಳವಣಿಗೆ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು ಮತ್ತು ಪೊಲೀಸರ ತನಿಖೆಗೆ ಒತ್ತಾಯಿಸಿದ್ದವು.
ತನಿಖೆಯಲ್ಲಿ ಗೊತ್ತಾಗಿದ್ದೇನು?
ಪೊಲೀಸರ ಮಾಹಿತಿ ಪ್ರಕಾರ, ಬಿ-ಫಾರ್ಮಾ ಪದವೀಧರನಾಗಿರುವ ಆಯುಷ್ ತನ್ನ ಕುಟುಂಬದ ಮೆಡಿಕಲ್ ಸ್ಟೋರ್ ನಿರ್ವಹಣೆಯಲ್ಲಿ ಸಹಾಯ ಮಾಡುತ್ತಿದ್ದರು. 2018ರಲ್ಲಿ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುವ ವೇಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಾಂದಿನಿ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿದ್ದು, ಬಳಿಕ ಚಾಂದಿನಿ ಹಾಗೂ ಆಕೆಯ ಕುಟುಂಬದ ಸದಸ್ಯರು ಆಯುಷ್ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, 2023ರಲ್ಲಿ ಆಯುಷ್ ಅವರನ್ನು ದೆಹಲಿಗೆ ಕರೆದೊಯ್ದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಆಗ ಅವರಿಗೆ ಮೊಹಮ್ಮದ್ ಅಲಿ ಎಂಬ ಹೆಸರು ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೆ, ದೆಹಲಿಯಲ್ಲಿ ನಿಕಾಹ್ ಕೂಡ ನಡೆದಿತ್ತು ಎಂದು ದೂರಿನಲ್ಲಿ ಹೇಳಲಾಗಿದ್ದರೂ, ತನಿಖೆ ವೇಳೆ ಮದುವೆಯ ಯಾವುದೇ ಪ್ರಮಾಣಪತ್ರ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಕುಟುಂಬದವರು ನೀಡಿದ ದೂರಿನ ಮೇರೆಗೆ ನೀಡಿದ ದೂರಿನ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ಚಾಂದಿನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ಅವರನ್ನು ಬಂಧಿಸಿದ್ದರು. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಉತ್ತರ ಪ್ರದೇಶ ಅಕ್ರಮ ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ದಾಖಲಿಸಲಾಗಿದೆ
ಈ ನಡುವೆ ಇದೀಗ ಆಯುಷ್ ಅವರು ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದು ಈ ಕೋರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಾತನಾಡಿರುವ ಆಯುಷ್, ತಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದುದನ್ನು ಒಪ್ಪಿಕೊಂಡಿದ್ದಾರೆ. “ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಧರ್ಮ ಬದಲಿಸಿಕೊಂಡಿದ್ದೆ. ಆದರೆ ನಿಮ್ಮ ನೋವನ್ನು ನೋಡಿ ಹಾಗೂ ನನ್ನ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು, ನನ್ನ ಸ್ವಇಚ್ಛೆಯಿಂದ ಮತ್ತೆ ಸನಾತನ ಧರ್ಮಕ್ಕೆ ಮರಳಿದ್ದೇನೆ. ಇನ್ನು ಮುಂದೆ ಕುಟುಂಬದೊಂದಿಗೆ ಅವರ ಆಶ್ರಯದಲ್ಲಿ ಬದುಕಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಡೈರಿಯಲ್ಲಿ ಏನಿದೆ?
ಇವುಗಳ ನಡುವೆಯೇ ಪೊಲೀಸರು ಡೈರಿಯನ್ನು ಪತ್ತೆ ಮಾಡಿದ್ದಾರೆ. ಅದರಲ್ಲಿ ಆತ “ನಾನು ಒಂದು ಕಾರ್ಯಾಚರಣೆಯಲ್ಲಿದ್ದೇನೆ – ಆಯುಷ್ ಮಲಿಕ್ (I am on a mission) ಎಂದು ಬರೆದಿದ್ದಾರೆ. ಮಿಷನ್ ಎಂದರೆ ಸುಮ್ಮನೇ ಇರುವ ವಿಷಯವಲ್ಲ. ಇದು ಬಹುದೊಡ್ಡ ಯಾವುದೋ ಉಗ್ರ ಕೃತ್ಯ ಇರಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆಯುಷ್ ಮಲಿಕ್ ಅವರ ಮನೆಯಿಂದ ವಶಪಡಿಸಿಕೊಂಡ ಡೈರಿಯ ಮೊದಲ ಪುಟದಲ್ಲಿ ಇದನ್ನು ಬರೆಯಲಾಗಿದೆ.
ಇಂಡಿಯಾ ಟುಡೇ ಟಿವಿಗೆ ಲಭ್ಯವಾದ ಡೈರಿಯನ್ನು, ಆಯುಷ್ ಮಲಿಕ್ ಇಸ್ಲಾಂಗೆ ಮತಾಂತರಗೊಂಡು ಮೊಹಮ್ಮದ್ ಅಲಿ ಎಂಬ ಹೆಸರನ್ನು ಸ್ವೀಕರಿಸಿದ್ದಾರೆ ಎಂಬ ಮಾಹಿತಿಯ ನಂತರ ಪೊಲೀಸರು ನಡೆಸಿದ ಶೋಧದ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಡೈರಿ ನಮೂದು ಮತಾಂತರದ ಹಿಂದೆ ದೊಡ್ಡ ಪಿತೂರಿಯನ್ನು ಸೂಚಿಸುತ್ತದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಶೋಧದ ಸಮಯದಲ್ಲಿ, ಪೊಲೀಸರು ಮನೆಯಿಂದ ದೊಡ್ಡ ಚಾಕು ಮತ್ತು ಎರಡು ಮೊಬೈಲ್ ಫೋನ್ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಚಾಕು ಅಥವಾ ಡೈರಿಯ ಮಹತ್ವವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ, ಆದರೆ ತನಿಖೆಯ ಭಾಗವಾಗಿ ಎರಡೂ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.




