ಬೆಂಗಳೂರು, ಆಗಸ್ಟ್ 10: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ತ್ರಿವರ್ಣ ಧ್ವಜ ಯಾತ್ರೆ ನಡೆಯಿತು. ಕೆ.ಸಿ.ಜನರಲ್ ಆಸ್ಪತ್ರೆಯ ಮುಂಭಾಗದ ಸರಕಾರಿ ಶಾಲೆಯ ಬಳಿಯಿಂದ ಪ್ರಾರಂಭಗೊಂಡ ಈ ಯಾತ್ರೆಯ ಉದ್ದಕ್ಕೂ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎನ್ನುವ ಘೋಷಣೆಗಳು ಮೊಳಗಿದವು.
ಇದರ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಡಾ.ಸಿ.ಎನ್ ಅಶ್ವಥನಾರಾಯಣ ಸೇರಿ ಹಲವು ಪ್ರಮುಖ ನಾಯಕರು ವಹಿಸಿದ್ದರು.



