ಬೆಳ್ತಂಗಡಿ ಶಾಸಕರ ಮುಂದಾಳತ್ವದಲ್ಲಿ ಗುಂಡಿ ಬಿದ್ದ ಕನ್ನಡಿಕಟ್ಟೆ ರಸ್ತೆ ದುರಸ್ತಿ | ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
ಬೆಳ್ತಂಗಡಿ ಮೂಡಬಿದ್ರೆ ಮುಖ್ಯ ರಸ್ತೆಯ ಪಡಂಗಡಿ ಪೆರಣಮಂಜ ಕುಡ್ದ ಓಡೀಲು ಕ್ರಾಸ್, ಕನ್ನಡಿಕಟ್ಟೆ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದಿದ್ದು, ಶಾಸಕ ಹರೀಶ್ ಪೂಂಜಾ ಅವರ ಗಮನಕ್ಕೆ ಈ ವಿಷಯ ಬಂದಿದ್ದು, ಕೂಡಲೇ ಅವರು ಪಡಂಗಡಿಯ ಮಾಜಿ ಪಂಚಾಯತ್ ಅಧ್ಯಕ್ಷರಾದ ಸಂತೋಷ ಕುಮಾರ್ ಜೈನ್ ಅವರಿಗೆ ಕರೆ ಮಾಡಿ ಇದನ್ನು ತಿಳಿಸಿದ್ದು, ಕೂಡಲೇ ರಸ್ತೆಯ ಗುಂಡಿಗಳಿಗೆ ಜಲ್ಲಿ ಮಿಕ್ಸ್ ಹಾಕುವಂತೆ ತಿಳಿಸಿದರು.
Sponsoredತಕ್ಷಣ ಸಂತೋಷ ಕುಮಾರ್ ಜೈನ್ ಹಾಗೂ ಅವರ ತಂಡ ನಿನ್ನೆ ರಸ್ತೆ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಗುಂಡಿಗಳಿಂದ ಮುಕ್ತಿ ನೀಡಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಶಾಸಕರ ಹಾಗೂ ಸಂತೋಷ ಕುಮಾರ್ ಜೈನ್ ಇವರ ಜನಪಯೋಗಿ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.




