ಸೋಮವಾರ, 26 ಅಕ್ಟೋಬರ್ 2026
Trending

ಬೆಳಗಾವಿ : ಪಟಾಕಿಯ ಸದ್ದಿಗೆ ಹೆದರಿ ಕಾಲುವೆಗೆ ಬಿದ್ದು 80 ಕುರಿಗಳ ಸಾವು!!

ಪಟಾಕಿ ಸದ್ದಿಗೆ ಬೆದರಿ ಕಾಲುವೆಗೆ ಹಾರಿ 80 ಕುರಿಗಳು ದಾರುಣ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.

Sponsored

ಶ್ರೀ ಕುರಿ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಈ ದುರ್ಘಟನೆ ನಡೆದಿದೆ. ಶ್ರಾವಣ ಮಾಸದ ಪ್ರಯುಕ್ತ ಭಾನುವಾರ ರಾತ್ರಿ ಪ್ರತಿವರ್ಷದಂತೆ ಈ ವರ್ಷವೂ ಕುರಿಗಾಹಿಗಳು ತಮ್ಮ ಕುರಿಗಳನ್ನೆಲ್ಲ ಒಟ್ಟಾಗಿ ಸೇರಿಸಿ ಶ್ರೀ ಕುರಿ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದರು.

ಈ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಕುರಿಗಳು ಭಯಭೀತಗೊಂಡು ದಿಕ್ಕಾಪಾಲಾಗಿ ಓಡಿದವು. ಅಲ್ಲದೆ, ಸಮೀಪದಲ್ಲಿದ್ದ ಕಾಲುವೆಗೆ ಕುರಿಗಳು ಬಿದ್ದು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಸುಮಾರು ₹20 ಲಕ್ಷ ಮೌಲ್ಯದ 75 ಕುರಿಗಳು ಹಾಗೂ 5 ಕುರಿಮರಿ ಮೃತಪಟ್ಟಿವೆ ಎನ್ನಲಾಗಿದೆ. ನೋಡ ನೋಡುತ್ತಿದ್ದಂತೆ ನಡೆದ ಈ ದುರಂತ ಘಟನೆಯಲ್ಲಿ ಕುರಿಗಾಹಿಗಳು ಆಘಾತಕ್ಕೊಳಗಾಗಿದ್ದಾರೆ.