ಶನಿವಾರ, 24 ಅಕ್ಟೋಬರ್ 2026

ವಾಟ್ಸಪ್‌ನಲ್ಲಿ ಮದುವೆ ಆಮಂತ್ರಣ ಬಂದರೆ ಕ್ಲಿಕ್‌ ಮಾಡುವ ಮೊದಲು ಎಚ್ಚರ!

ವಾಟ್ಸಪ್‌ಗೆ ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶವನ್ನು ತೆರೆಯಲು ಹೋಗುವ ಮೊದಲು ಎಚ್ಚರವಾಗಿರಿ. ಮದುವೆ ಆಹ್ವಾನ ಪತ್ರಿಕೆಯೊಂದು ವಾಟ್ಸಪ್‌ ಮೂಲಕ ಬಂದಿದ್ದು, ಫೈಲ್‌ ಓಪನ್‌ (ಎಪಿಕೆ ಫೈಲ್‌ ಸ್ಕ್ಯಾಮ್‌) ಮಾಡಿದ ಸರಕಾರಿ ಅಧಿಕಾರಿಯೊಬ್ಬರು ಸೈಬರ್‌ ವಂಚಕರ ಬಲೆಗೆ ಬಿದ್ದು ಸುಮಾರು 9.96 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ್‌ ಬಾಬು ಅವರಿಗೆ ಜು.14 ರಂದು ಸಂಜೆ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ವಾಟ್ಸಪ್‌ನಲ್ಲಿ ಮದುವೆ ಆಹ್ವಾನ ಸಂದೇಶ ಬಂದಿದೆ. ಪರಿಚಿತರದ್ದಿರಬಹುದು ಎಂದು ಭಾವಿಸಿ ಫೈಲ್‌ ಓಪನ್‌ ಮಾಡಿದ್ದಾರೆ, ಓಪನ್‌ ಮಾಡಿದಾಗ ಅದು ಎಪಿಕೆ ಫೈಲ್‌ ಎನ್ನುವುದು ಗೊತ್ತಾಗಿದೆ. ಆದರೆ 15 ನಿಮಿಷದಲ್ಲಿ ಅವರ ಮೊಬೈಲ್‌ಗೆ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುತ್ತಿರುವ ಸಂದೇಶ ಬರಲು ಆರಂಭಿಸಿದೆ.

ಕೂಡಲೇ ಬ್ಯಾಂಕ್‌ ಖಾತೆ ಪರಿಶೀಲನೆ ಮಾಡಿದಾಗ ಒಂಭತ್ತು ಲಕ್ಷ ತೊಂಭತ್ತಾರು ಸಾವಿರ ಹಣ ವಿವಿಧ ಹಂತಗಳಲ್ಲಿ ವಂಚಕರ ಖಾತೆಗೆ ವರ್ಗಾವಣೆ ಆಗಿರುವುದು ತಿಳಿದು ಬಂದಿದೆ. ಕೂಡಲೇ ರಮೇಶ್‌ ಬಾಬು ಅವರು ಉತ್ತರ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ.