ಶನಿವಾರ, 24 ಅಕ್ಟೋಬರ್ 2026

BCCI: RCB ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಗೆ ಬಿಸಿಸಿಐ ಬಿಗ್ ಶಾಕ್ !!

New Delhi : Royal Challengers Bangalore's Shreyanka Patil celebrates the wicket of Delhi Capitals' Arundhati Reddy during the WPL final match between Delhi Capitals and Royal Challengers Bangalore at the Arun Jaitley Stadium, in New Delhi, Sunday, March 17, 2024. (Photo: IANS/Biplab Banerjee)

BCCI: ಆರ್‌ಸಿಬಿ ಆಟಗಾರ್ತಿ ಹಾಗೂ ಕನ್ನಡತಿ ಆಗಿರುವ ಶ್ರೇಯಾಂಕ ಪಾಟೀಲ್ ಗೆ ಭಾರತೀಯ ಕ್ರಿಕೆಟ್ ಮಂಡಳಿ ದೊಡ್ಡ ಶಾಕ್ ನೀಡಿದೆ.ಅದೇನೆಂದರೆ ಬಿಎಸಿಸಿಐ ಶೀಘ್ರದಲ್ಲೇ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲಿದೆ. ಅದರಂತೆಯೇ ಈ ಬಾರಿಗೆ ಮಹಿಳಾ ತಂಡದ ಒಪ್ಪಂದದಲ್ಲಿ 21 ಆಟಗಾರ್ತಿಯರಿಗೆ ಸ್ಥಾನ ಸಿಗಲಿದೆ. ಆದರೆ ಕನ್ನಡತಿ ಶ್ರೇಯಾಂಕ ಪಾಟೀಲ್‌ ಅವರನ್ನು ಎಲ್ಲಾ ಗ್ರೇಡ್‌ಗಳ ಪಟ್ಟಿಯಿದ ಹೊರಗಿಡಲಾಗಿದೆ.

ಹೌದು, BCCI ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲಿದೆ. ಅದರಂತೆಯೇ ಈ ಬಾರಿಗೆ ಮಹಿಳಾ ತಂಡದ ಒಪ್ಪಂದದಲ್ಲಿ 21 ಆಟಗಾರ್ತಿಯರಿಗೆ ಸ್ಥಾನ ಸಿಗಲಿದ್ದು, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಎ ಗ್ರೇಡ್‌ನಲ್ಲಿ ವಾರ್ಷಿಕ 50 ಲಕ್ಷ ರೂಪಾಯಿ ವೇತನ ಪಡೆಯಲಿದ್ದಾರೆ. ಆದರೆ, ಕನ್ನಡತಿ ಶ್ರೇಯಾಂಕ ಪಾಟೀಲ್‌ ಅವರನ್ನು ಎಲ್ಲಾ ಗ್ರೇಡ್‌ಗಳ ಪಟ್ಟಿಯಿದ ಹೊರಗಿಡಲಾಗಿದೆ. 

ಕೇಂದ್ರ ಒಪ್ಪಂದ ಹೊಂದಿರುವ ಆಟಗಾರ್ತಿಯರು ತಮ್ಮ ವೇತನದ ಜೊತೆಗೆ ಪಂದ್ಯಗಳಿಗಾಗಿ ಶುಲ್ಕವನ್ನೂ ಕೂಡ ಪಡೆಯುತ್ತಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ-20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಿದ್ದರೆ ಒಪ್ಪಂದದಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ ನೋಡಿ.

ಒಪ್ಪಂದಲ್ಲಿ ಸ್ಥಾನ ಪಡೆದವರು: 

ಮಹಿಳಾ ತಂಡದ ಕೇಂದ್ರ ಒಪ್ಪಂದದಲ್ಲಿ ಈ ಬಾರಿ ಒಟ್ಟು 21 ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿಯ ಕೇಂದ್ರ ಒಪ್ಪಂದದಲ್ಲಿ ಕೇವಲ 16 ಆಟಗಾರ್ತಿಯರಿಗೆ ಸ್ಥಾನ ದೊರೆತಿದ್ದರೆ, ಈ ಬಾರಿಗೆ ಹೆಚ್ಚುವರಿ ಆಟಗಾರ್ತಿಗಳು ಸೇರಿ ಅವಕಾಶ ಪಡೆದಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ವೇತನ ಸಿಗಲಿದೆ. ಬಿಸಿಸಿಐ ಈ ಒಪ್ಪಂದದ ಮೂಲಕ ತಂಡಕ್ಕೆ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ತರಲು ಉದ್ದೇಶಿಸಿದೆ.

ಎ ಗ್ರೇಡ್‌ ಸ್ಥಾನ ಪಡೆದ ಆಟಗಾರ್ತಿಯರು: 

ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ (ವಾರ್ಷಿಕ 50 ಲಕ್ಷ ರೂಪಾಯಿ).

ಬಿ ಗ್ರೇಡ್ ಸ್ಥಾನ ಪಡೆದ ಆಟಗಾರ್ತಿಯರು: 

ರೇಣುಕಾ ಸಿಂಗ್ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ (ವಾರ್ಷಿಕ 30 ಲಕ್ಷ ರೂಪಾಯಿ)

ಸಿ ಗ್ರೇಡ್‌ ಸ್ಥಾನ ಪಡೆದ ಆಟಗಾರ್ತಿಯರು: 

ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್ (ವಾರ್ಷಿಕ 10 ಲಕ್ಷ ರೂಪಾಯಿ)

ಒಪ್ಪಂದಿಂದ ಹೊರಗುಳಿದವರು

* ಪೂಜಾ ವಸ್ತ್ರಾಕರ್

*  ಶ್ರೇಯಾಂಕಾ ಪಾಟೀಲ್

*  ಟಿಟಾಸ್ ಸಾಧು