ಸೋಮವಾರ, 26 ಅಕ್ಟೋಬರ್ 2026
Trending

ಮರಿಯಾನೆಯನ್ನು ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಸಿಬ್ಬಂದಿಗಳು | ಅರಣ್ಯಾಧಿಕಾರಿಗಳನ್ನು ನಂಬಿ ಅವರ ಹಿಂದೆ ಮರಿಯಾನೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಿರುವ ವಿಡಿಯೋ ಮನಮುಟ್ಟುವಂತಿದೆ

ತಾಯಿ-ಮಗುವಿನ ಸಂಬಂಧ ತುಂಬಾ ವಿಶೇಷವಾದದ್ದು. ಇದು ಮನುಷ್ಯರಲ್ಲಿ ಮಾತ್ರ ಅಲ್ಲ. ಬಹುತೇಕ ಪ್ರಾಣಿಗಳಲ್ಲಿ ಕೂಡ ಈ ಗುಣ ಕಂಡುಬರುತ್ತದೆ. ಈ ಸಂಬಂಧದ ಭಾವನೆಗಳನ್ನು ತೋರಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಈಗ ಅಂತಹದೇ ಒಂದು ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಇದರಲ್ಲಿ ಆನೆಯಲ್ಲಿ ಇರುವ ತಾಯಿ- ಮಗುವಿನ ಸಂಬಂಧದ ಗುಣವನ್ನು ನಾವು ನೋಡಬಹುದು. ಈ ವಿಡಿಯೋ ನೋಡಿ ನೆಟ್ಟಿಗರು ಮನದುಂಬಿ ಪ್ರತಿಕ್ರಿಯೆ ನೀಡಿದ್ದಾರೆ.

Sponsored

ಆನೆಮರಿಯೊಂದು ತನ್ನ ತಾಯಿಯಿಂದ ಬೇರ್ಪಟ್ಟ ನೋವಿನಲ್ಲಿ ಇರುತ್ತದೆ. ಅಂತಹ ಕಷ್ಟದ ಸಂದರ್ಭದಲ್ಲಿ ಆನೆ ತನ್ನ ತಾಯಿಗಾಗಿ ಹುಡುಕಾಟ ನಡೆಸುತ್ತಿರುತ್ತದೆ. ಈ ವೇಳೆ, ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ನಡೆದು ಆನೆ ಮರಿಯನ್ನು ಆನೆಯ ಕುಟುಂಬಕ್ಕೆ ಮತ್ತೆ ಪರಿಚಯಿಸಿ, ಅದರೊಂದಿಗೆ ಸೇರಿಸಿ ಬಿಡುತ್ತಾರೆ. ಮರಿ ಆನೆಯನ್ನು ತಾಯಿ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳು ಸಹಾಯ ಮಾಡಿದ ವೀಡಿಯೋ ಹೃದಯಸ್ಪರ್ಶಿಯಾಗಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Advertisement
Advertisement

ತಮಿಳುನಾಡಿನ ಅರಣ್ಯದಲ್ಲಿ ಮರಿ ಆನೆಯೊಂದು ಹಳ್ಳಕ್ಕೆ ಬಿದ್ದಿದ್ದು, ಅದನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ. ಬಿದ್ದ ಕಾರಣ ಮರಿ ಆನೆಗೆ ಸ್ವಲ್ಪ ಗಾಯವಾಗಿದ್ದು, ಅದಕ್ಕೆ ಚಿಕಿತ್ಸೆಯನ್ನು ನೀಡಲಾಗಿದೆ. ನಂತರ ಅರಣ್ಯ ಅಧಿಕಾರಿಗಳ ತಂಡ ಆ ಮರಿ ಆನೆಗೆ ತಾಯಿಯನ್ನು ಹುಡುಕಲು ಸಹಾಯ ಮಾಡಿದ್ದು, ನಂತರ ತಾಯಿಯ ಜೊತೆಗೆ ಸೇರಿಸಿದ್ದಾರೆ. ಈ ವೀಡಿಯೋ ಮನ ಮುಟ್ಟುವಂತಿದೆ.

ಗಾಯಗೊಂಡಿದ್ದ ಮರಿ!

ಭಾರತೀಯ ಅರಣ್ಯ ಅಧಿಕಾರಿ ಸುಧಾ ರಾಮನ್ ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಈ ಪುಟ್ಟ ಮರಿ ಆನೆಯು ತಮಿಳುನಾಡು Z+ ಅರಣ್ಯ ಅಧಿಕಾರಿಗಳ ತಂಡದ ಜೊತೆಗೆ ಭದ್ರತೆಯೊಂದಿಗೆ ಮತ್ತೆ ತನ್ನ ತಾಯಿಯನ್ನು ಸೇರಿಕೊಳ್ಳಲು ಸಂತೋಷದಿಂದ ನಡೆಯುತ್ತಿದೆ. ಮೊದಲು ಈ ಮರಿ ಏಕಾಂಗಿಯಾಗಿ ಮತ್ತು ಗಾಯಗೊಂಡು ನಮಗೆ ಸಿಕ್ಕಿತು. ಟಿಎನ್ ಅರಣ್ಯ ತಂಡವು ಮರಿಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತು ತಾಯಿಯೊಂದಿಗೆ ಸೇರಲು ಕಾವಲಾಗಿ ನಿಂತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

200ಕ್ಕೂ ಹೆಚ್ಚು ಬಾರಿ ರೀ ಟ್ವೀಟ್!

ಈ ವೀಡಿಯೋದಲ್ಲಿ ಮರಿ ಆನೆ ಕಾಡಿನಲ್ಲಿ ಅರಣ್ಯ ಅಧಿಕಾರಿಗಳ ಜೊತೆಯಲ್ಲಿ ಜಾಗರೂಕತೆಯಿಂದ ಮತ್ತು ಕಾವಲಿನಲ್ಲಿ ಸುರಕ್ಷಿತವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅರಣ್ಯ ತಂಡದ ಈ ಪ್ರಯತ್ನವನ್ನು ಎಲ್ಲರೂ ಪ್ರಶಂಸಿದ್ದು, ಈ ವೀಡಿಯೋವನ್ನು 200ಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಮಾಡಲಾಗಿದೆ

https://twitter.com/supriyasahuias/status/1445980850240176128?s=20

ಸುಂದರವಾದ ದೃಶ್ಯ

ಎಲ್ಲ ಅರಣ್ಯ ಅಧಿಕಾರಿಗಳಿಗೆ ಸಲ್ಯೂಟ್. ನಿಮ್ಮ ಪರಿಶ್ರಮದಿಂದ ಪ್ರಕೃತಿ ಮತ್ತು ಮಾನವೀಯತೆಯನ್ನು ಉಳಿಸುತ್ತಿದ್ದೀರಾ ಎಂದು ವೀಕ್ಷಕರು ಕಾಮೆಂಟ್ ಮಾಡಲಾಗಿದೆ. ಆ ಮರಿ ಆನೆ ಅರಣ್ಯ ತಂಡವನ್ನು ನಂಬಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದರೆ ವಿಶ್ವದಲ್ಲಿ ಸಕಾರಾತ್ಮಕತೆ ಇದೆ ಎಂದು ನಂಬಬಹುದು ಎಂದು ಕಾಮೆಂಟ್ ಮಾಡಿದ್ದು, ಇದು ಎಂಥಹ ಸುಂದರವಾದ ದೃಶ್ಯ, ಆ ಮರಿ ಆನೆ ಅವರ ಕುಟುಂಬದವರ ಬಳಿ ಸುರಕ್ಷತೆಯಿಂದ ಸೇರಲಿ ಎಂದು ಕಾಮೆಂಟ್ ಮಾಡಿದ್ದಾರೆ.

Advertisement