ಶನಿವಾರ, 24 ಅಕ್ಟೋಬರ್ 2026

ಮಕ್ಕಳ ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ ದೇವಸ್ಥಾನದ ಅರ್ಚಕ : ಅರ್ಚಕನ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ತಿರುಪ್ಪರ್ ಜಿಲ್ಲೆಯಲ್ಲಿ 50 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ.

ಆರೋಪಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಸ್ಕೋ) 2012 ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆ 2000 ರ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

ಯುಎಸ್ ಮೂಲದ ಎನ್‌ಜಿಒ ಆಗಿರುವ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್‌ಪ್ಲೋಯೆಡ್ ಚಿಲ್ಮನ್ (ಎನ್‌ಸಿಎಂಇಸಿ) ಆರೋಪಿ ವಿರುದ್ಧ ದೂರು ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

NCMEC ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ಫೋಟೋ ಅಪ್ಲೋಡ್ ಮಾಡುವ ಅರ್ಚಕನ ಬಗ್ಗೆ ವಿಷಯ ತಿಳಿದು.ಅದರ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು.ಎನ್‌ಸಿಎಂಇಸಿಯ ದೂರಿನ ನಂತರ, ತಿರುಪ್ಪರ್ ಪೊಲೀಸರು ಆರೋಪಿಯ ಐಪಿ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ಬಳಸಿಕೊಂಡು ಆತನನ್ನು ಪತ್ತೆ ಹಚ್ಚಿದ್ದಾರೆ. ಶಂಕಿತ ಆರೋಪಿಯನ್ನು ಜಿಲ್ಲೆಯ ದೇವಸ್ಥಾನದ ಅರ್ಚಕ ವಿ.ವೈತಿನಾಥನ್ ಎಂದು ಗುರುತಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ