ಸೋಮವಾರ, 26 ಅಕ್ಟೋಬರ್ 2026
Trending

ಆಳ್ವಾಸ್ ಮೆಡಿಕಲ್ ಕಾಲೇಜಿಗೆ ತುಳು ಅಲ್ಪಸಂಖ್ಯಾತ ಸಂಸ್ಥೆ ಮಾನ್ಯತೆ- ಇನ್ಮುಂದೆ ತುಳು ಭಾಷಿಕರಿಗೆ 54 MBBS ಸೀಟುಗಳು ಮೀಸಲು

ಮೂಡುಬಿದಿರೆಯ ಪ್ರಸಿದ್ಧ ಆಳ್ವಾಸ್ ಶಿಕ್ಷಣ ಸಂಸ್ಥೆಯ ‘ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಯಂಡ್ ರಿಸರ್ಚ್‌ ಸೆಂಟರ್’ಗೆ ತುಳು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಕೋಟಾದಡಿ ಅಧಿಕೃತ ಅನುಮೋದನೆ ದೊರೆತಿದೆ. ತುಳುನಾಡಿನ ವಿದ್ಯಾರ್ಥಿಗಳಿಗೆ ಹೊಸ ಅವಕಾಶವೊಂದು ಬಾಗಿಲು ತೆರೆದಂತೆ ಮಾಡಿದೆ..

Sponsored

ಈ ಒಂದು ಅವಕಾಶದಿಂದಾಗಿ 2026-27ನೇ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ಒಟ್ಟು 150 ಎಂ.ಬಿ.ಬಿ.ಎಸ್ (MBBS) ಸೀಟುಗಳ ಪೈಕಿ 54 ಸೀಟುಗಳು ತುಳು ಭಾಷಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. 

ತುಳು ಭಾಷೆ ಮಾತನಾಡುವ ಸಮುದಾಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಹಾಗೂ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಮಂಜೂರಾತಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ವಿಶೇಷವಾಗಿ ಕರಾವಳಿ ಕರ್ನಾಟಕದ (ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು) ತುಳು ಭಾಷಿಕ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳು ತಮ್ಮದೇ ನೆಲದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಪಡೆಯಲು ಇದು ಸುವರ್ಣ ಅವಕಾಶ ಒದಗಿಸಲಿದೆ.

ಆಳ್ವಾಸ್ ವೈದ್ಯಕೀಯ ಸಂಸ್ಥೆಯ ಅಡಿಯಲ್ಲಿ ಈಗಾಗಲೇ 650 ಹಾಸಿಗೆಗಳ ಆಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆ ಕಾರ್ಯಾಚರಿಸುತ್ತಿದ್ದು, ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಉತ್ತಮ ತರಬೇತಿ ವಾತಾವರಣ ಲಭ್ಯವಿದೆ. ಡಾಕ್ಟರ್ ಆಗುವ ಕನಸು ಹೊಂದಿರುವ ಅರ್ಹ ತುಳು ಭಾಷಿಕ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಪ್ರವೇಶ ಪ್ರಕ್ರಿಯೆಗೆ ಅಗತ್ಯವಿರುವ ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು ಹಾಗೂ ಪ್ರವೇಶ ನಿಯಮಾವಳಿಗಳ ಕುರಿತು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹಾಗೂ ಸೂಚನೆಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಆಳ್ವಾಸ್ ಶಿಕ್ಷಣ ಸಂಸ್ಥೆ ಕೋರಿದೆ.