ಸೋಮವಾರ, 26 ಅಕ್ಟೋಬರ್ 2026
Trending

ಅಕ್ಷಯ ಕಾಲೇಜು- ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಗಳ ಪದವಿ ಕಾಲೇಜಿನಲ್ಲಿ ವಾಗ್ವೈಭವ ಸಂಸ್ಕೃತ ಸಂಘ ದ ವಾರ್ಷಿಕ ಚಟುವಟಿಕೆಗಳ ಮತ್ತು ಶ್ರೀ ಸುರಸರಸ್ವತೀ ಸಭಾದ ಸಂಸ್ಕೃತ ಪ್ರಥಮಾ ತರಗತಿಯ ಉದ್ಘಾಟನಾ ಸಮಾರಂಭವು ಐಕ್ಯೂಎಸಿ ಸಹಯೋಗದಲ್ಲಿ ಇಂದು ಕಾಲೇಜಿನ ಅಕ್ಷಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶ್ರೀ ರಮೇಶ ಆಚಾರ್ಯರು ಉದ್ಘಾಟಿಸಿ , “ಸಂಸ್ಕೃತ ಎನ್ನುವುದು ಕೇವಲ ಒಂದು ಭಾಷೆಯಲ್ಲ. ವೇದ, ಉಪನಿಷತ್ತು , ಯೋಗ , ವಿಜ್ಞಾನ , ಸಾಹಿತ್ಯ , ಸುಭಾಷಿತಗಳ ಸಮೃದ್ಧ ಜ್ಞಾನವು ಅಂತರ್ಗತವಾದ ಭಾರತದ ಜ್ಞಾನ ಭಂಡಾರದ ಕೀಲಿಕೈ. ‘ ಸಂಸ್ಕೃತಿಃ ಸಂಸ್ಕೃತಾಶ್ರಿತಃ ‘ ಎನ್ನುವ ನುಡಿಯಂತೆ ಭಾರತದ ಸನಾತನ ಸಂಸ್ಕೃತಿಯನ್ನು ಅರಿಯಲು ಎಲ್ಲರೂ ಸಂಸ್ಕೃತವನ್ನು ಕಲಿತು , ಪ್ರಾಚೀನ ಭಾಷೆಯನ್ನು ಉಳಿಸಿ ಬೆಳೆಸಬೇಕು ” ಎಂದು ಶುಭಹಾರೈಸಿದರು.
ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ .ಕೆ. ಪಕ್ಕಳ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಅಕ್ಷಯ ಕಾಲೇಜು ಸಂಸ್ಕೃತ ಭಾಷೆಗೆ ಸದಾ ಗೌರವ, ಪ್ರೋತ್ಸಾಹವನ್ನು ನೀಡುತ್ತದೆ. ಸಂಸ್ಕೃತ ಪ್ರಥಮ ತರಗತಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುವುದರ ಮೂಲಕ ಸಂಸ್ಕೃತ ಕಲಿಕೆಯ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಸಂಸ್ಕೃತ ವಿಭಾಗ ಪ್ರಮುಖರಾದ ಶ್ರೀಮತಿ ಸಾಯಿಕೃಪಾ. ಕೆ. ಪ್ರಾಸ್ತಾವಿಕ ನುಡಿಯನ್ನಾಡಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಅರ್ಪಿತ್ .ಟಿ. ಎ. ಮತ್ತು ಐಕ್ಯೂಎಸಿ ಸಂಯೋಜಕಿ ಶ್ರೀಮತಿ ರಶ್ಮಿ .ಕೆ. ಉಪಸ್ಥಿತರಿದ್ದರು.
ದ್ವಿತೀಯ ವಾಣಿಜ್ಯ ವಿಭಾಗದ ಕು. ಯಶಸ್ವಿ .ಬಿ.ಕೆ. ಮತ್ತು ರಶ್ಮಿ ರಾವ್ ಪ್ರಾರ್ಥಿಸಿ, ಸಂಸ್ಕೃತ ಸಂಘದ ಕಾರ್ಯದರ್ಶಿ ಕು.ಶ್ರೇಯಾ ಸ್ವಾಗತಿಸಿ , ಕು. ದೀಕ್ಷಾ ವಂದಿಸಿದ ಈ ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಹಾಗೂ ಸಂಸ್ಕೃತ ಸಂಘದ ಸಂಯೋಜಕಿ ಶ್ರೀಮತಿ ಶಶಿಕಲಾ. ಎಸ್. ನಿರೂಪಿಸಿದರು.

Sponsored
Advertisement
Advertisement
Advertisement