ಸೋಮವಾರ, 26 ಅಕ್ಟೋಬರ್ 2026
Trending

ದ್ವಿಚಕ್ರ ವಾಹನಕ್ಕೆ ನಟ ದರ್ಶನ್‌ ಪುತ್ರ ವಿನೀಶ್‌ ಇದ್ದ ಕಾರು ಡಿಕ್ಕಿ

Vijayalakshmi Darshan

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಜೈಲು ಪಾಲಾಗಿರುವ ವಿಷಯದ ಮಧ್ಯೆಯೇ ಇದೀಗ ಪುತ್ರ ವಿನೀಶ್‌ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಆರ್‌ ಆರ್‌ ನಗರದಲ್ಲಿ ಅಪಘಾತಕ್ಕೀಡಾಗಿರುವ ಕುರಿತು ವರದಿಯಾಗಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಪೋರ್ಡ್‌ ಎಂಡೋವರ್‌ ಕಾರು, ಮುಂಭಾಗದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ವಿನೀಶ್‌ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ನೇರ ಕಾರಣ ಎಂದು ವರದಿಯಾಗಿದೆ.

Sponsored

ಅಪಘಾತ ನಡೆದ ಕೂಡಲೇ ದ್ವಿಚಕ್ರ ವಾಹನ ಸವಾರ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರನ್ನು ತಡೆದು ನಿಲ್ಲಿಸಿದ್ದು, ಈ ವೇಳೆ ಕಾರಿನಿಂದ ಇಳಿದ ವಿನೀಶ್‌ ಹಾಗೂ ಸ್ಥಳೀಯರ ಮಧ್ಯೆ ರಸ್ತೆಯಲ್ಲಿಯೇ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕರು ವಿನೀಶ್‌ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement