ಶನಿವಾರ, 24 ಅಕ್ಟೋಬರ್ 2026

ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ, ಸ್ಕೂಟರ್ ಗೆ ಡಿಕ್ಕಿ- ಪೋಷಕರ ವಿರುದ್ಧ ಬಿತ್ತು ಕೇಸ್

ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ಸ್ಕೂಟರ್ ಗೆ ಗುದ್ದಿದ್ದು, ಆತನ ಪೋಷಕರ ವಿರುದ್ಧ ಪ್ರಕರಣದ ಕಲಾಗಿರುವ ಘಟನೆ ಪರ್ಕಳ ನೇತಾಜಿ ನಗರ ಎಂಬಲ್ಲಿ ನಡೆದಿದೆ.

ನೇತಾಜಿ ನಗರ ಕಡೆಯಿಂದ ಪ್ರಗತಿ ನಗರದ ಕಡೆಗೆ ಬಡಗುಬೆಟ್ಟು ಗ್ರಾಮದ ಅಪ್ರಾಪ್ತನೊಬ್ಬ ಚಲಾಯಿಸಿಕೊಂಡು ಬರುತ್ತಿದ್ದ ಕಾರು, ಮನೆಯ ಹೊರಗಡೆ ರಸ್ತೆ ಬದಿ ನಿಲ್ಲಿಸಿದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರ ಪರಿಣಾಮ ಸ್ಕೂಟರ್ ಮನೆಯ ಕಂಪೌಂಡಿಗೆ ತಾಗಿ ಬಿದ್ದು, ಸ್ಕೂಟರ್ ಜಖಂಗೊಂಡಿದೆ. 

ಇದೀಗ ಕಾರು ಚಾಲಕ ಹಾಗೂ ಅಪ್ರಾಪ್ತ ಬಾಲಕನಿಗೆ ಕಾರನ್ನು ಚಲಾಯಿಸಲು ನೀಡಿದ ಕಾರಿನ ಮಾಲಕ ಸಲೀಂ ಎಂಬವರ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.