ಶುಕ್ರವಾರ, 6 ನವೆಂಬರ್ 2026

ಪ್ರೀತಿಯ ನೆಪವೊಡ್ಡಿ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ – ಅನ್ಯಕೋಮಿನ ಯುವಕ ಅರೆಸ್ಟ್!

Advertisement
Advertisement

ಅಪ್ರಾಪ್ತ ಬಾಲಕಿಯೊಬ್ಬಳಿಗೆ ಪ್ರೀತಿಯ ಜಾಲ ಬೀಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವ ಭೀಕರ ಕೃತ್ಯ ನಗರದ ಬಡಾವಣೆಯೊಂದರಲ್ಲಿ ಬೆಳಕಿಗೆ ಬಂದಿದೆ.

Sponsored

ಖಾಜಾಸಾಬ್ ಪಠಾಣ್ ಎಂಬಾತನೇ ಈ ಅಮಾನವೀಯ ಕೃತ್ಯ ಎಸಗಿದ ದುರುಳ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement
Advertisement

ಖಾಜಾಸಾಬ್ ಪಠಾಣ್ ಸ್ಥಳೀಯ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಟಾರ್ಗೆಟ್ ಮಾಡಿದ್ದನು. ಬಾಲಕಿಗೆ ಮೋಸದ ಪ್ರೀತಿಯ ಆಮಿಷ ಒಡ್ಡಿದ್ದ ಈತ, ಇತ್ತೀಚೆಗೆ ಆಕೆಯನ್ನು ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. 

Advertisement

ಬಾಲಕಿಯೊಂದಿಗೆ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಖಾಜಾಸಾಬ್‌ನನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಆತನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ತೀವ್ರವಾಗಿ ವಿಚಾರಣೆ ನಡೆಸಿ ಆತನ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಸಂತ್ರಸ್ತ ಅಪ್ರಾಪ್ತ ಬಾಲಕಿಯೊಂದಿಗಿನ ಕೆಲವು ಆಕ್ಷೇಪಾರ್ಹ ಹಾಗೂ ಖಾಸಗಿ ಫೋಟೋಗಳು ಪತ್ತೆಯಾಗಿವೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಕಾಮುಕನಿಗೆ ಸರಿಯಾಗಿ ಧರ್ಮದೇಟು ನೀಡಿ, ವಿದ್ಯಾಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ. 

Advertisement
Advertisement