ಶನಿವಾರ, 24 ಅಕ್ಟೋಬರ್ 2026

ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಮೂತ್ರ ಕುಡಿಸಿದ ಸಹಪಾಠಿ

ಮಧ್ಯಪ್ರದೇಶದ ಗುನಾ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.  5ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಸಹಪಾಠಿ ಬಾಲಕಿಯರ ನೀರಿನ ಬಾಟಲಿಯಲ್ಲಿ ಮೂತ್ರ ಬೆರೆಸಿ ಅವರಿಗೆ ಬಲವಂತದಿಂದ ಕುಡಿಸಿದ್ದಾನೆ.

ಈ ಕುರಿತು ವಿದ್ಯಾರ್ಥಿನಿಯರು ದೂರನ್ನು ನೀಡಿದಾಗ, ಅವರು ಬಾಯಿಯ ರುಚಿ ಕೆಟ್ಟಿದ್ದರೆ ರೂ.10 ಚಾಕಲೇಟ್‌ ತಿಂದು ಸರಿಪಡಿಸಿಕೊಳ್ಳಿ ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದ್ದಾರೆ.

ಗುನಾ ಜಿಲ್ಲೆಯ ಆರನ್‌ ಬ್ಲಾಕ್‌ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸೋಮವಾರ ನಡೆದಿದೆ. ಘಟನೆ ಕುರಿತು ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದ್ದು, ವರದಿ ಬಂದ ನಂತರ ಪ್ರಾಂಶುಪಾಲರು ಮತ್ತು ತಪ್ಪಿತಸ್ಥ ವಿದ್ಯಾರ್ಥಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.