ಭಾನುವಾರ, 25 ಅಕ್ಟೋಬರ್ 2026
Trending

TVK: ಅಬ್ಬಬ್ಬಾ.. ವಿಜಯ್ ಘೋಷಿಸಿದ 6 ಗ್ಯಾರೆಂಟಿ ಬಗ್ಗೆ ಕೇಳಿದರೆ ಶಾಕ್ ಆಗುತ್ತೆ – ಇದುವರೆಗೂ ಯಾರು ಕೊಟ್ಟಿಲ್ಲ, ಮುಂದೆ ಕೊಡಲ್ಲ

TVK: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಡಿಎಂಕೆ, ಎಐಎಡಿಎಂಕೆ ಪಕ್ಷಗಳ ನಡುವೆ ಇದೀಗ ತಮಿಳು ನಟ ವಿಜಯ್ ಟಿವಿಕೆ ಪಕ್ಷ ಕಣಕ್ಕಿಳಿದಿದ್ದು, ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಿ ಜನಸೇವೆಗೆ ಮುಂದಾಗಿದ್ದಾರೆ. ಈಗಾಗಲೇ ಸಮಾವೇಶ, ರ್ಯಾಲಿಗಳನ್ನು ನಡೆಸಿ ಜನರ ಮತಬೇಟೆಗೆ ಇಳಿದಿದ್ದಾರೆ. ಅಲ್ಲದೆ ಇದೀಗ ಅವರು ಎಲ್ಲರೂ ಅಚ್ಚರಿ ಪಡುವಂತೆ ಆರು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

Sponsored

ಕರ್ನಾಟಕದಲ್ಲಿ ಅದಕ್ಕೆ ಗ್ಯಾರಂಟಿ ಎನ್ನುವ ಹೆಸರು ಕೊಡಲಾಗಿತ್ತು. ಇದೀಗ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಕೂಡ ಇದೇ ಹಾದಿ ಹಿಡಿದಿದ್ದಾರೆ. ಮಹಾಬಲಿಪುರಂ ನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಪರ ನಿಲ್ಲುವುದಾಗಿ ವಿಜಯ್ ಹೇಳಿದ್ದಾರೆ. ಅದಕ್ಕಾಗಿ ವಿಶೇಷ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ. ಗ್ಯಾರಂಟಿ ಎನ್ನುವ ಪದ ಬಳಸದೇ ಮಹಿಳೆಯರಿಗಾಗಿ ಒಂದಷ್ಟು ಭರವಸೆಯನ್ನು ನೀಡಿದ್ದಾರೆ.

 ವಿಜಯ್ ಘೋಷಿಸಿದ ಗ್ಯಾರಂಟಿ ಯೋಜನೆಗಳು:

 60 ವರ್ಷ ವಯಸ್ಸಿನವರೆಗಿನ ಎಲ್ಲಾ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2500 ರೂಪಾಯಿಗಳನ್ನು ನೀಡಲಾಗುವುದು.

2. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 6 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು.

3. ಮದುವೆ ಸಮಯದಲ್ಲಿ ಹೆಣ್ಣು ಹೆತ್ತವರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ತಾಯಿಯ ಮನೆಯ ಪರವಾಗಿ ಪ್ರತಿಯೊಬ್ಬ ತಂಗಿಗೆ ಮದುವೆಯ ಸಮಯದಲ್ಲಿ ಒಂದು ಸವರನ್ ಚಿನ್ನ ಮತ್ತು ಒಂದು ರೇಷ್ಮೆ ಸೀರೆ ನೀಡಲಾಗುವುದು.

4. ಮಹಿಳೆಯರ ಸುರಕ್ಷತೆಗಾಗಿ ಶೇರ್-ಆಟೋಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಪ್ಯಾನಿಕ್ ಬಟನ್‌ಗಳು ಇರುವಂತೆ ವ್ಯವಸ್ಥೆ ಮಾಡುತ್ತೇವೆ.

5. ಜೀರೊ ಡಾರ್ಕ್ ಸ್ಪಾಟ್ಸ್. ಮಹಿಳೆಯರ ಸುರಕ್ಷತೆಗಾಗಿ ಎಲ್ಲಾ ಪ್ರದೇಶಗಳಲ್ಲಿ ಯಾವಾಗಲೂ ಸಿಸಿಟಿವಿ ಕ್ಯಾಮೆರಾಗಳು ಮತ್ತು ಕೇಂದ್ರೀಕೃತ ಕಣ್ಗಾವಲು ಜಾಲ ಇರುತ್ತದೆ.

6. ತಮಿಳುನಾಡಿನಲ್ಲಿ ಜನಿಸುವ ಪ್ರತಿ ಮಗುವಿಗೆ ಚಿನ್ನದ ಉಂಗುರ ನೀಡುವ ಜೊತೆಗೆ, ನವಜಾತ ಶಿಶುವಿಗೆ ಆಹಾರ, ಡೈಪರ್‌ಗಳು ಮತ್ತು ಬಟ್ಟೆಗಳನ್ನು ಒಳಗೊಂಡಿರುವ ‘ಬೇಬಿ ವೆಲ್ಕಮ್’ ಕಿಟ್ ನೀಡುವುದಾಗಿ ವಿಜಯ್ ಹೇಳಿದ್ದಾರೆ.