ಸೋಮವಾರ, 26 ಅಕ್ಟೋಬರ್ 2026
Trending

Petrol- Diesel: ರಾಜ್ಯದಲ್ಲಿ ಪೆಟ್ರೋಲ್ ದರ 5ರೂ, ಡೀಸೆಲ್ ದರ 3 ರೂ ಏರಿಕೆ!!

Petrol- Diesel:  ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಿರ್ಮಿತವಾಗಿರುವ ಯುದ್ಧ ವಾತಾವರಣದಿಂದಾಗಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರಷ್ಯಾ ಮೇಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ, ‘ನಯಾರಾ ಎನರ್ಜಿ’ ತೈಲ ಕಂಪನಿಯು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹5 ಹಾಗೂ ಡೀಸೆಲ್ ಬೆಲೆಯನ್ನು ₹3 ರಷ್ಟು ಹೆಚ್ಚಳ ಮಾಡಿದೆ.

Sponsored

ಯಸ್, ರಾಜ್ಯದಲ್ಲಿ ಪೆಟ್ರೋಲ್ (Petrol) ಅಭಾವದ ವದಂತಿ ಹಬ್ಬಿದ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಮಧ್ಯೆ ನಯಾರ ಪೆಟ್ರೋಲ್‌ ಬಂಕ್‌ಗಳಲ್ಲಿ (Nayara Petrol Bunk) ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹5 ಹಾಗೂ ಡೀಸೆಲ್ ಬೆಲೆಯನ್ನು ₹3 ರಷ್ಟು ಹೆಚ್ಚಳ ಮಾಡಲಾಗಿದೆ.

Advertisement
Advertisement

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಬೆನ್ನಲ್ಲೇ ಇದೀಗ 1 ಲೀಟರ್‌ ಪೆಟ್ರೋಲ್‌ ಬೆಲೆ 108.28 ರೂ.ಗಳಿಗೆ ತಲುಪಿದ್ದರೆ, ಡೀಸೆಲ್‌ ಬೆಲೆ 1 ಲೀಟರ್‌ಗೆ 94.10 ರೂ.ಗಳಿಗೆ ಮಾರಾಟ ಮಾಡಲಾಗ್ತಿದೆ. ಇದನ್ನಲ್ಲೇ ರಾಜ್ಯದ ಹಲವು ಪೆಟ್ರೋಲ್ ಬಂಕ್ಗಳಲ್ಲಿ ಜನರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತುಂಬಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ದರ ಹೆಚ್ಚಳದ ಬೆನ್ನಲ್ಲೇ ಕಂಪೆನಿಯು”ನಮ್ಮ 7000ಕ್ಕೂ ಹೆಚ್ಚು ರೀಟೇಲ್ ನೆಟ್‌ವರ್ಕ್ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಗುಣಮಟ್ಟದ ಇಂಧನ ಪೂರೈಕೆಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ರಿಫೈನರಿ ನಿರ್ವಹಣಾ ಕಾರ್ಯವನ್ನು (Turnaround) ಅತ್ಯಂತ ಎಚ್ಚರಿಕೆಯಿಂದ ಯೋಜಿಸಲಾಗಿದೆ. ಈ ಅವಧಿಯಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನಾವು ಸನ್ನದ್ಧರಾಗಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement