ಭಾನುವಾರ, 25 ಅಕ್ಟೋಬರ್ 2026

Mangaluru : ನೇತ್ರಾವತಿ ದಡದಲ್ಲಿ ಆಧಾರ್ ಕಾರ್ಡ್ ರಾಶಿ ಪತ್ತೆ ಪ್ರಕರಣ – ಅಂಚೆ ಕಚೇರಿ ವಿರುದ್ಧ ದೂರು ದಾಖಲು

Mangaluru : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಅಪರಂಗಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೇತ್ರಾವತಿ ನದಿ ದಡದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆಯಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂಚೆ ಇಲಾಖೆ ವಿರುದ್ದ ಕಂದಾಯ ಇಲಾಖೆ ಪೊಲೀಸರಿಗೆ ದೂರು ನೀಡಿದೆ.

Sponsored

ಮಂಗಳವಾರ ಸಂಜೆ ಸ್ಥಳೀಯ ನಿವಾಸಿಗಳ 2013 ರಿಂದ 2023 ರ ವರೆಗಿನ ಸುಮಾರು ನೂರಾರು ಮೂಲ ಆಧಾರ್ ಕಾರ್ಡ್ ಗಳು ನದಿತೀರದಲ್ಲಿ ಸ್ಥಳೀಯರಿಗೆ ಪತ್ತೆಯಾಗಿತ್ತು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆ ಅಂಚೆ ಕಚೇರಿಯ ಸೀಲ್ ಪತ್ತೆಯಾಗಿದೆಯೆನ್ನಲಾಗಿದೆ.

Marriage AdMarriage AdSponsored

ಅಲ್ಲದೆ ಪತ್ತೆಯಾದ ಆಧಾರ್‌ ಕಾರ್ಡ್‌ಗಳಲ್ಲಿ ಪುದು ಅಂಚೆ ಕಚೇರಿಯ ಸೀಲ್‌ ಇರುವುದರಿಂದ ಗ್ರಾಮ ಸ್ಥರಿಗೆ ಹಂಚದೇ ಇರುವ ಅಂಚೆ ಇಲಾಖೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.