ಸೋಮವಾರ, 26 ಅಕ್ಟೋಬರ್ 2026
Trending

ನರ್ಮದಾ ನದಿ ತೀರದಲ್ಲಿ ನೂರಾರು ವೋಟರ್‌ ಐಡಿಗಳು ಪತ್ತೆ

ನರ್ಮದಾ ನದಿ ತೀರದಲ್ಲಿ 343 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಖರ್ಗೋನ್‌ ಜಿಲ್ಲೆಯ ಮಂಡಲೇಶ್ವರ ಪಟ್ಟಣದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.

Sponsored

ಪತ್ತೆಯಾದ ಗುರುತಿನ ಚೀಟಿಗಳು ನೆರೆಯ ಇಂದೋರ್‌ ಜಿಲ್ಲೆಯ ರಾವು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದವು ಎನ್ನಲಾಗಿದೆ.

ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳಿಗೆ ಈ ಗುರುತಿನ ಚೀಟಿಗಳು ದೊರಕಿದ್ದು, ಕೂಡಲೇ ಆಡಳಿತ ಮಂಡಳಿಗೆ ಮಾಹಿತಿಯನ್ನು ನೀಡಿದ್ದಾರೆ.