ಮೀನು ಜಲಚರ, ಅದಕ್ಕೆ ನೆಲದ ಮೇಲೆ ಸಂಚರಿಸಲು ಸಾಧ್ಯವಿಲ್ಲ. ಹೀಗೆಂದು ನೀವೆಂದು ಕೊಂಡಿದ್ದರೆ ಈಗಲೇ ಆ ಆಲೋಚನೆಯನ್ನು ಬಿಟ್ಟುಬಿಡಿ, ಏಕೆಂದರೆ ಇಸ್ರೇಲ್ನ ವಿಜ್ಞಾನಿಗಳು ಮೀನಿಗೆ ನೆಲದ ಮೇಲೂ ಸಂಚರಿಸಲು ಅವಕಾಶ ಮಾಡಿಕೊಡಲೆಂದೇ ಹೊಸ ಇಸ್ರೇಲ್ ಒಂದು ರೊಬೋಟಿಕ್ ವಾಹನವನ್ನು ತಯಾರಿಸಿದೆ. ಇಸ್ರೇಲ್ನ ಬೆನ್-ಗುರಿಯಾನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೊಸದೊಂದು ರೊಬೋ ಟೆಕ್ ವಾಹನವನ್ನು ತಯಾರಿಸಿದ್ದಾರೆ.
Sponsoredಇದರಲ್ಲಿ ಮಧ್ಯಭಾಗದಲ್ಲಿ ಫಿಶ್ ಟ್ಯಾಂಕ್ ಇದ್ದರೆ ಮೇಲೆ ಲಿಡಾರ್ ಅಳವಡಿಸಲಾಗಿದೆ. ಕೆಮರಾ, ಓಮ್ಮಿ ವೀಲ್ಸ್, ಕಂಪ್ಯೂಟರ್, ಎಲೆಕ್ಟಿಕ್ ಮೋಟಾರ್ಗಳನ್ನೂ ಇದರಲ್ಲಿ ಜೋಡಿಸಲಾಗಿದೆ.
Marriage AdSponsoredಈ ವಾಹನದಲ್ಲಿ ಪಲ್ಲಡ್ ಲೇಸರ್ ಲೈಟ್ ಸೆನ್ಸರ್ಗಳನ್ನು ಬಳಸಲಾಗಿದ್ದು, ವಾಹನದಲ್ಲಿರುವ ಫಿಶ್ ಟ್ಯಾಂಕ್ ನೊಳಗಿನ ಮೀನಿನ ಚಲನವಲನವನ್ನು ಗಮನಿಸಿ, ಅದರ ಅನುಸಾರ ಚಕ್ರ ತಿರುಗುತ್ತದೆ. ಅದರಿಂದಾಗಿ ವಾಹನ ತನ್ನಿಂತಾನಾಗೇ ಮುಂದೆ ಸಾಗುತ್ತದೆ.
ಅಂದ ಹಾಗೆ, ಈ ವಾಹನದ ನಿಜ ನಿಯಂತ್ರಣ ಇರುವುದು ಮೀನಿನ ಬಳಿ, ಅದು ಯಾವ ಕಡೆ ಹೋಗಬೇಕೆಂದು ನಿರ್ಧರಿಸಿ, ಆ ಕಡೆಯ ಗ್ಲಾಸ್ನ್ನು ಮುಟ್ಟಿದರೆ ಮಾತ್ರವೇ ಚಕ್ರ ತಿರುಗುತ್ತದೆ. ಅದರಿಂದಾಗಿ ವಾಹನ ತನ್ನಿಂತಾನಾಗೇ ಮುಂದೆ ಸಾಗುತ್ತದೆ. ವಿಜ್ಞಾನಿಗಳು ಈ ವಾಹನದ ಪರೀಕ್ಷೆಗೆಂದು ಆರು ಗೋಲ್ಡನ್ ಫಿಶ್ಗಳನ್ನು ಬಳಸಿಕೊಂಡಿದ್ದಾರೆ. ಕೇವಲ 10 ತರಬೇತಿಯಲ್ಲಿ ಈ ಮೀನುಗಳು ಉತ್ತಮ ಚಾಲಕರಾಗಿ ಹೊರ ಹೊಮ್ಮಿದವು ಎನ್ನುತ್ತಾರೆ ವಿಜ್ಞಾನಿಗಳು,




