ಶುಕ್ರವಾರ, 6 ನವೆಂಬರ್ 2026

ಮುದ್ದಿನ ಗಿಳಿ ಕಾಣೆ, 1 ಲಕ್ಷ ಬಹುಮಾನ ಘೋಷಣೆ ಮಾಡಿದ ಕುಟುಂಬ

Talking Parrot
Advertisement
Advertisement

ವಡೋದರಾ: ʼಲಡ್ಡುʼ ಹೆಸರಿನ ಆಫ್ರಿಕನ್‌ ಗ್ರೇ ತಳಿಯ ಗಿಳಿಯೊಂದು ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ ಬರೋಬ್ಬರಿ 1 ಲಕ್ಷ ರೂ ಬಹುಮಾನ ನೀಡುವುದಾಗಿ ವಡೋದರದ ಪಾರಿಖ್‌ ಕುಟುಂಬ ಘೋಷಣೆ ಮಾಡಿದೆ.

Sponsored

ಅ.31 ರಂದು ಸಂಜೆ 6 ತಿಂಗಳ ವಯಸ್ಸಿನ ಈ ಗಿಳಿ ತನ್ನ ಪಂಜರದ ಬಾಗಿಲು ತೆರೆದು ಹಾರಿಹೋಗಿದೆ. ಗಿಳಿಯನ್ನು ತಮ್ಮ ಸ್ವಂತ ಮಗನಂತೆ ಬೆಳೆಸಿದ್ದಾಗಿ ತಿಳಿಸಿದ ಜೆಸ್ಸಿಕಾ ಪಾರಿಖ್‌, ಕಳೆದ ನಾಲ್ಕು ದಿನಗಳಿಂದ ಆಹಾರವಿಲ್ಲದೆ ಆತ ಎಲ್ಲಿದ್ದಾನೋ ಎನ್ನುವ ಭಯ ನಮ್ಮನ್ನು ಕಾಡುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.

Advertisement
Advertisement

ಮಾನವ ಧ್ವನಿಯನ್ನು ಅನುಕರಿಸುವ ಹಾಗೂ ಅತ್ಯಂತ ಬುದ್ಧಿವಂತಿಕೆಗೆ ಹೆಸರಾಗಿರುವ ಈ ಆಫ್ರಿಕನ್‌ ಗ್ರೇ ತಳಿ ಗಿಳಿಗಳು ಪ್ರಸ್ತುತ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಲ್ಲಿ ಅಳಿವಿನಂಚಿನಲ್ಲಿದೆ. ಈ ಗಿಳಿಯನ್ನು ಹುಡುಕಲು ಸಾರ್ವಜನಿಕರಲ್ಲಿ ಕುಟುಂಬ ಮನವಿ ಮಾಡಿದೆ.

Advertisement
Advertisement
Advertisement