ಸೋಮವಾರ, 26 ಅಕ್ಟೋಬರ್ 2026
Trending

ಎಸ್.ಎಸ್.ಎಲ್.ಸಿ ಸಹಿತ ಪಿಯುಸಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ!!ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಲೂ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು,ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ದ್ವಿತೀಯ ದರ್ಜೆಯ ಹುದ್ದೆಗಳಾದ ಸ್ಟೇನೋಗ್ರಾಫರ್, ಕೆಳ ವಿಭಾಗದ ಗುಮಾಸ್ತ ಹಾಗೂ ಮೆಸೆಂಜರ್ ಹಾಗೂ ಸಫಾಯಿ ಹುದ್ದೆಗಳ ಭರ್ತಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

Sponsored

ಮೇಲ್ಕಂಡ ಹುದ್ದೆಗಳಿಗೆ 18000-40000 ವರೆಗೆ ವೇತನವಿದ್ದು ಉದ್ಯೋಗ ಆಕಾಂಕ್ಷಿಗಳು ಪ್ರಯತ್ನಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಿಯುಸಿ ಹಾಗೂ ಎಸ್.ಎಸ್ ಎಲ್.ಸಿ ಯಲ್ಲಿ ಪಾಸ್ ಆಗಿರಬೇಕು.

Advertisement
Advertisement

ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದ್ದು ಅರ್ಜಿ ಯನ್ನು ಸೂಕ್ತ ದಾಖಲೆಗಳೊಂದಿಗೆ ‘ರಕ್ಷಣಾ ಸಚಿವಾಲಯ ಪ್ರಧಾನ ಕಚೇರಿ 111 ಸಬ್ ಏರಿಯಾ ಬೆಂಗ್ಡುಬಿ ಮಿಲಿಟರಿ ನಿಲ್ದಾಣ,
ಪಶ್ಚಿಮ ಬಂಗಾಳ’ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

Advertisement