ಸೋಮವಾರ, 26 ಅಕ್ಟೋಬರ್ 2026
Trending

Donald Trump: ಡೊನಾಲ್ಡ್‌ ಟ್ರಂಪ್‌ ಹತ್ಯೆ ಯತ್ನ ಪ್ರಕರಣ; ಆರೋಪಿ ಭಾವಚಿತ್ರ ಬಿಡುಗಡೆ

Donald Trump: ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತು ಹಿಡಿಯಲಾಗಿದೆ. ಮಾಹಿತಿಯ ಪ್ರಕಾರ, ಶೂಟ್‌ ಮಾಡಿದ ಯುವಕ 20 ವರ್ಷದ ಯುವಕ.

Donald Trump

Donald Trump: ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತು ಹಿಡಿಯಲಾಗಿದೆ. ಮಾಹಿತಿಯ ಪ್ರಕಾರ, ಶೂಟ್‌ ಮಾಡಿದ ಯುವಕ 20 ವರ್ಷದ ಯುವಕನಾಗಿದ್ದು, ಅವರ ಹೆಸರು ಥಾಮಸ್ ಮ್ಯಾಥ್ಯೂ ಕುಕ್ಸ್ ಎಂದು ಗುರುತಿಸಲಾಗಿದೆ. ಹತ್ಯೆ ಯತ್ನ ಮಾಡಿದ ಈತನ ಉದ್ದೇಶವೇನು ಎಂಬುದನ್ನು ಪತ್ತೆ ಹಚ್ಚಲು ತನಿಖಾ ತಂಡ ಪ್ರಯತ್ನಿಸುತ್ತಿದೆ.

Sponsored

ವರದಿಗಳ ಪ್ರಕಾರ, ಮ್ಯಾಥ್ಯೂ ನಿರ್ಮಾಣ ಹಂತದಲ್ಲಿರುವ ಸ್ಥಾವರದ ಮೇಲ್ಛಾವಣಿಯ ಮೇಲಿಂದ, ಡೊನಾಲ್ಡ್ ಟ್ರಂಪ್ ಅನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾನೆ. ಆದರೆ, ಬುಲೆಟ್ ಅವರ ಕಿವಿಗೆ ಬಿದ್ದಿರುವುದು ಟ್ರಂಪ್ ಅದೃಷ್ಟ. ಇದಾದ ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ಅಲ್ಲಿಂದ ಹೊರಗೆ ಕರೆದೊಯ್ದರು.

Actor Darshan: ನಟ ದರ್ಶನ್ ಬಿಡುಗಡೆ ಬಗ್ಗೆ ದಸರೀಘಟ್ಟ ಚೌಡೇಶ್ವರಿ ದೇವಿ ಕಳಸದಲ್ಲಿ ಪ್ರಶ್ನೆ ಕೇಳಲು ಮೊರೆ ಹೋದ ಅಭಿಮಾನಿಗಳು! ಅಷ್ಟಕ್ಕೂ ದೇವಿ ಕೊಟ್ಟ ಉತ್ತರವೇನು?

ನ್ಯೂಯಾರ್ಕ್ ಪೋಸ್ಟ್‌ನ ಈ 20 ವರ್ಷದ ಯುವಕ ಬೆತೆಲ್ ಪಾರ್ಕ್‌ನ ನಿವಾಸಿ. ಇದು ರ್ಯಾಲಿ ಸ್ಥಳದಿಂದ ಸುಮಾರು 40 ಮೈಲುಗಳಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಆದರೆ, ಅವರು ಟ್ರಂಪ್ ಮೇಲೆ ಏಕೆ ದಾಳಿ ಮಾಡಿದ್ದಾನೆ ಈತ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರಂಪ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಶೂಟರ್ ಭಾಷಣದ ವೇದಿಕೆಯಿಂದ ಸುಮಾರು 130 ಗಜಗಳಷ್ಟು ದೂರದಲ್ಲಿದ್ದ ಎಂದು ಹೇಳಲಾಗಿದೆ. ಎಆರ್ ಮಾದರಿಯ ರೈಫಲ್‌ನಿಂದ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ.

ಪೆನ್ಸಿಲ್ವೇನಿಯಾದಲ್ಲಿ ನಡೆದ ಟ್ರಂಪ್ ಅವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರ ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು. ಗುಂಡಿನ ದಾಳಿ ನಡೆದ ತಕ್ಷಣ ಗದ್ದಲ ಉಂಟಾಗಿದ್ದು, ಜನರು ಪ್ರಾಣ ಉಳಿಸಿಕೊಳ್ಳಲು ಓಡಿದ ದೃಶ್ಯ ಕಂಡು ಬಂತು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಬಿಲ್ ಕ್ಲಿಂಟನ್ ಟ್ರಂಪ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

Mudhola : ಯಪ್ಪಾ ಏನಿದು ಭೀಕರ ಕೃತ್ಯ.. !! ನೋವು ವಾಸಿ ಮಾಡೋದಾಗಿ ಹೇಳಿ ಕೊಡಲಿಯಲ್ಲಿ ಹೊಡೆಯುತ್ತಾನೆ ಈ ಡೋಂಗಿ ಬಾಬಾ !!