ಸೋಮವಾರ, 26 ಅಕ್ಟೋಬರ್ 2026
Trending

Sim Card: ಹಳೆಯ ಸಿಮ್ ಗಳಿಂದ ಚಿನ್ನ ತೆಗೆದು 27 ಲಕ್ಷ ಸಂಪಾದಿಸಿದ ವ್ಯಕ್ತಿ!!

 

Sponsored

Sim Card: ವ್ಯಕ್ತಿಯೊಬ್ಬ, ಬಳಸಿ ಬಿಸಾಡಿದ ಹಳೆಯ ಸಿಮ್ ಕಾರ್ಡ್‌ಗಳಿಂದ ಚಿನ್ನವನ್ನು ಹೊರತೆಗೆದು, ಅದನ್ನು ಮಾರಿ ಬರೋಬ್ಬರಿ 27 ಲಕ್ಷ ರೂಪಾಯಿಯನ್ನು ಸಂಪಾದಿಸಿದ ಅಪರೂಪದ ಘಟನೆಯೊಂದು ಚೀನಾದಲ್ಲಿ ನಡೆದಿದೆ. 

Advertisement
Advertisement

ಹೌದು, ಬಹುತೇಕರು ಎರಡು ಸಿಮ್ ಬಳಕೆ ಮಾಡುತ್ತಾರೆ. ಇದೇ ವೇಳೆ ಹಲವರು ಪೋರ್ಟ್, ಸಿಮ್ ನಂಬರ್ ಬದಲಾವಣೆ, ನಿಷ್ಕ್ರೀಯಗೊಂಡ, ಡ್ಯಾಮೇಜ್ ಸಿಮ್‌ಗಳನ್ನು ಬದಲಾಯಿಸುತ್ತಾರೆ. ಮೊಬೈಲ್ ಶಾಪ್, ಸರ್ವೀಸ್ ಸೆಂಟ್, ಸಿಮ್ ಔಟ್‌ಲೆಟ್‌ಗಳಲ್ಲಿ ಈ ರೀತಿ ಹಳೇ ಸಿಮ್‌ಗಳ ರಾಶಿಯೇ ಇರುತ್ತದೆ. ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಇಲ್ಲೊಬ್ಬ ಗುಜುರಿ ವ್ಯಾಪಾರಿ, ಕಬ್ಬಿಣ, ಸ್ಟೀಲ್ ಸೇರಿದಂತೆ ಹಲವು ಲೋಹಗಳ ಸಂಗ್ರಹ ಮಾಡುತ್ತಾ, ಈ ರೀತಿಯ ಸಿಮ್‌ಗಳನ್ನು ಸಂಗ್ರಹಿಸಿದ್ದಾನೆ. ಇದೀಗ ಇದೇ ಸಿಮ್‌ಗಳಿಂದ ಚಿನ್ನ ಹೊರತೆಗೆದ ಗುಜುರಿ ವ್ಯಾಪಾರಿ ಬರೋಬ್ಬರಿ 27 ಲಕ್ಷ ರೂಪಾಯಿ ಆದಾಯಗಳಿಸಿದ್ದಾರೆ.

ಚೀನಾದ ಕ್ವಿಯಾವೊ ಎಂದು ಕರೆಯಲ್ಪಡುವ ಈ ವ್ಯಕ್ತಿ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಹುಯಿಝೌದಲ್ಲಿ ನೆಲೆಸಿದ್ದಾರೆ. ಇವರು ವೃತ್ತಿಪರ ಲೋಹ ಸಂಸ್ಕರಣಾ ತಜ್ಞರು ಆಗಿದ್ದಾರೆ‌. ಇತ್ತೀಚೆಗೆ ಅವರು ಸುಮಾರು 2 ಟನ್ ತೂಕದ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಸಿಮ್ ಕಾರ್ಡ್‌ಗಳನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸಿ, ಅದರಿಂದ ಸುಮಾರು 191 ಗ್ರಾಂ ಚಿನ್ನವನ್ನು ಹೊರತೆಗೆದಿದ್ದಾರೆ. ಅವರ ಪ್ರಕಾರ, ಸಿಮ್ ಕಾರ್ಡ್‌ಗಳು ಅಲ್ಪ ಪ್ರಮಾಣದ ಚಿನ್ನವನ್ನು ಹೊಂದಿರುತ್ತವೆ. ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಚಿಪ್‌ಗಳಲ್ಲಿ ವಿದ್ಯುತ್ ಹರಿಯಲು ಮತ್ತು ತುಕ್ಕು ಹಿಡಿಯದಂತೆ ರಕ್ಷಣೆ ಮಾಡಲು ಅತ್ಯಂತ ಸಣ್ಣ ಪ್ರಮಾಣದ ಚಿನ್ನದ ಲೇಪನವನ್ನು ಸಿಮ್ ನಲ್ಲಿ ಬಳಸಲಾಗುತ್ತದೆ. ಸಿಮ್ ಕಾರ್ಡ್ ಸಾಮಾನ್ಯವಾಗಿ 0.001 ಗ್ರಾಂ ಗಿಂತ ಕಡಿಮೆ ಚಿನ್ನವನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

ಇದೀಗ ಸಿಮ್ ಸಂಗ್ರಹಿಸಿ ಚಿನ್ನ ತೆಗೆಯಲು ಹಲವರು ಮುಂದಾಗಿದ್ದಾರೆ. ಆದರೆ ಬಹುತೇಕರು ಸಿಮ್ ಕಾರ್ಡ್‌ನಿಂದ ನಿಗಿದಿತ ಪ್ರಮಾಣದಲ್ಲಿ ಬಿಸಿ ಮಾಡಿ ಚಿನ್ನ ಹೊರತೆಗೆಯಲು ವಿಫಲರಾಗಿದ್ದಾರೆ. ಇಷ್ಟೇ ಅಲ್ಲ ಇಂದು ವರ್ಷಗಳ ಸತತ ಪ್ರಯತ್ನಕ್ಕೆ ಸಿಕ್ಕ ಫಲ. ಹೀಗಾಗಿ ಅಲ್ಪಾವದಿಯಲ್ಲಿ ಹಣ ಮಾಡಲು ಈ ದಾರಿ ಸಾಧ್ಯವಿಲ್ಲ ಎಂದು ಹಲವರು ಸ್ಥಗಿತಗೊಳಿಸಿದ್ದಾರೆ. 

Advertisement