ಶುಕ್ರವಾರ, 6 ನವೆಂಬರ್ 2026

BJP ಯನ್ನೇ ಮೀರಿಸಿ ಮುನ್ನುಗ್ಗಿದ ಕಾಕ್ರೋಚ್ ಜನತಾ ಪಾರ್ಟಿ – 4 ದಿನದಲ್ಲಿ 9.8 ಮಿಲಿಯನ್ ಫಾಲೋವರ್ಸ್!!

Advertisement
Advertisement

ಭಾರತದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸುತ್ತಿದ್ದು, instagram ನಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮೀರಿಸಿ ಸಾಕಷ್ಟು ಸುದ್ದಿ ಮಾಡುತ್ತಿದೆ. 

Sponsored

ಹೌದು, ಭಾರತದಲ್ಲಿ ಈಚೆಗೆ ಪ್ರಾರಂಭವಾಗಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ಅಕೌಂಟ್ ಓಪನ್ ಆದ್ಮೇಲೆ ಕೇವಲ ನಾಲ್ಕು ದಿನಗಳಲ್ಲಿಯೇ 10 ಮಿಲಿಯನ್‌ಗಿಂತಲೂ ಅಂದ್ರೆ 1 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದೆ. ಸದ್ಯ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ಸ್‌ ಸಂಖ್ಯೆಯನ್ನು ಹಿಂದಿಕ್ಕಿದೆ.

Advertisement
Advertisement

@cockroachjantaparty ಹೆಸರಿನ Instagram ಖಾತೆ ಈವರೆಗೆ 10.6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದು, ಕ್ಷಣ ಕ್ಷಣದಿಂದ ಈ ಸಂಖ್ಯೆ ಏರಿಕೆಯಾಗುತ್ತಿದೆ. ಬಿಜೆಪಿ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ (@bjp4india) ಸುಮಾರು 8.7 ಮಿಲಿಯನ್, ಕಾಂಗ್ರೆಸ್ (@incindia) ಇನ್‌ಸ್ಟಾದಲ್ಲಿ 13.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದೆ. ಇನ್ನು ಆಮ್ ಆದ್ಮಿ ಪಕ್ಷದ Instagram ಖಾತೆಯು ಸುಮಾರು 1.9 ಮಿಲಿಯನ್ ಫಾಲೋವರ್ಸ್ ಹೊಂದಿದೆ.

Advertisement

ಈ ಪೇಜ್ ಹುಟ್ಟಿಕೊಂಡಿದ್ದು ಹೇಗೆ?

ಮೇ 16ರಂದು ಕಾಕ್ರೋಚ್ ಜನತಾ ಪಕ್ಷ ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಆರಂಭಗೊಂಡಿತ್ತು. ಈ ಅಭಿಯಾನಕ್ಕೆ ಪ್ರಮುಖ ಕಾರಣ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯಾಗಿದೆ. ನ್ಯಾಯಾಧೀಶರ ಹೇಳಿಕೆ ಯುವಕ ಸಮುದಾಯ ಆರಂಭಿಸಿದ ವಿಡಂಬನಾತ್ಮಕ ಅಭಿಯಾನ ಇದಾಗಿದೆ. ಮೊದಲಿಗೆ ಎಕ್ಸ್ ಖಾತೆಯಲ್ಲಿ ತಮಾಷೆಯಾಗಿ ಕಾಕ್ರೋಚ್ ಜನತಾ ಪಾರ್ಟಿ ಎಂದು ಕಮೆಂಟ್ ಮಾಡಲಾಗುತ್ತಿತ್ತು. ಮರುದಿನವೇ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಆರಂಭಿಸಲಾಯ್ತು. ಅಂದಿನಿಂದ ಈ ಖಾತೆಯ ಜನಪ್ರಿಯತೆ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ.

ಕಾಕ್ರೋಚ್ ಪಾರ್ಟಿಗೆ ಯಾವ್ಯಾವ ಪಕ್ಷಗಳ ಬೆಂಬಲ ಇದೆ?

ಮುಖ್ಯ ನ್ಯಾಯಮೂರ್ತಿಗಳ ಈ ಹೇಳಿಕೆ ಹೊರಬೀಳುತ್ತಿದ್ದಂತೆ, ದೇಶದ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಮತ್ತು ಕೆಸರೆರಚಾಟ ಆರಂಭವಾಯಿತು. ಯಾರಿಗೂ ಯಾವುದೇ ನಿರ್ದಿಷ್ಟ ‘ಕಾಕ್ರೋಚ್ ಪಾರ್ಟಿ’ ಎಂಬ ಅಧಿಕೃತ ಪಕ್ಷದ ಬೆಂಬಲ ಇಲ್ಲದಿದ್ದರೂ, ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳು ಈ ಹೆಸರನ್ನು ಪರಸ್ಪರ ಟೀಕಿಸಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ.

ಯುವಕರ, ಯುವಕರಿಗಾಗಿ ಮತ್ತು ಯುವಕರಿಂದ ಎಂದು ವೇದಿಕೆ ಪರಿಚಯ

ಈ ವೇದಿಕೆ ತನ್ನನ್ನು ‘ಯುವಕರ, ಯುವಕರಿಗಾಗಿ ಮತ್ತು ಯುವಕರಿಂದ’ ಎಂಬ ರಾಜಕೀಯ ವೇದಿಕೆಯಾಗಿ ಪರಿಚಯಿಸುತ್ತದೆ. ಇದರ ಪೋಸ್ಟ್‌ಗಳು ಮುಖ್ಯವಾಗಿ ನಿರುದ್ಯೋಗ, ರಾಜಕೀಯ ಹೊಣೆಗಾರಿಕೆ ಕೊರತೆ, ಪರೀಕ್ಷಾ ಪತ್ರಿಕೆ ಸೋರಿಕೆ, ಹಾಗೂ ಇತರ ಯುವಕರ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾತನಾಡುತ್ತವೆ. ಇಂತಹ ವಿಷಯಗಳು ನೇರವಾಗಿ ಯುವಕರ ದಿನನಿತ್ಯದ ಸಮಸ್ಯೆಗಳನ್ನು ಸ್ಪರ್ಶಿಸುತ್ತಿರುವುದರಿಂದ, ಈ ಖಾತೆ ಯುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಲು ಬಹಳಷ್ಟು ಯಶಸ್ವಿಯಾಗಿದೆ

ಸ್ಥಾಪಕ ಅಭಿಜೀತ್ ದೀಪ್ಕೆ ಯಾರು?

ಆದರೆ ಸಾಮಾಜಿಕ ಜಾಲತಾಣದಲ್ಲಿ, ಅಧಿಕೃತವಾಗಿ ಕಾಕ್ರೋಚ್​ ಜನತಾ ಪಾರ್ಟಿ ಎಂಬುದನ್ನು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿದ್ಯಾರ್ಥಿಯಾಗಿರುವ ಅಭಿಜೀತ್ ದೀಪ್ಕೆ ಪ್ರಾರಂಭಿಸಿದ್ದಾರೆ. ಈ ವ್ಯಕ್ತಿ ಈ ಹಿಂದೆ 2020 ಮತ್ತು 2023 ರ ನಡುವೆ ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧಿಸಿದ ರಾಜಕೀಯ ಪ್ರಚಾರಗಳು ಮತ್ತು ಸಾಮಾಜಿಕ ಮಾಧ್ಯಮ ಸ್ಥಳಗಳಲ್ಲಿ ಕೆಲಸ ಮಾಡಿದ್ದರು.

ಈ ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿರುವ ಅಭಿಜೀತ್ ದೀಪ್ಕೆಗೆ ಇನ್​ಸ್ಟಾಗ್ರಾಂನಲ್ಲಿ 9 ಮಿಲಿಯನ್ ಫಾಲೋವರ್ಸ್​ ಇದ್ದಾರೆ.ಅಭಿಜೀತ್ ದೀಪ್ಕೆ ಎಕ್ಸ್ ಜಾಲತಾಣದಲ್ಲಿ ಸಕ್ರಿಯರಾಗಿರುವ ಒಬ್ಬ ಭಾರತೀಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮತ್ತು ರಾಜಕೀಯ ವಿಡಂಬನಾಕಾರ (Satirist). ಈತ ದೇಶದ ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಲೇವಡಿ ಮಾಡುತ್ತಾ ಪೋಸ್ಟ್‌ಗಳನ್ನು ಹಾಕುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಇನ್ನೂ Instagram ಮಾತ್ರವಲ್ಲ, ಇತರ ವೇದಿಕೆಗಳಲ್ಲಿಯೂ ಈ ಅಭಿಯಾನ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಈ ಖಾತೆಗೆ ಸುಮಾರು 165,000 ಫಾಲೋವರ್‌ಗಳು ಇದ್ದಾರೆ. ರಾಜಕೀಯ ವಿಶ್ಲೇಷಕರ ಅಭಿಪ್ರಾಯದಲ್ಲಿ, ಈ ಪ್ರವೃತ್ತಿ ಯುವಕರೊಳಗೆ ಹೆಚ್ಚುತ್ತಿರುವ ಅಸಮಾಧಾನ, ನಿರಾಶೆ, ಹಾಗೂ ಸಾಮಾಜಿಕ ಮಾಧ್ಯಮ ಆಧಾರಿತ ಹೊಸ ರೀತಿಯ ರಾಜಕೀಯ ಅಭಿವ್ಯಕ್ತಿಯ ಸಂಕೇತವಾಗಿದೆ. ಸಂಪ್ರದಾಯಿಕ ರಾಜಕೀಯ ವೇದಿಕೆಗಳಿಂದ ದೂರವಾಗುತ್ತಿರುವ ಯುವಕರು, ಇಂತಹ ವ್ಯಂಗ್ಯ ಮತ್ತು ಹಾಸ್ಯದ ಮೂಲಕ ತಮ್ಮ ಅಸಮಾಧಾನ, ಪ್ರಶ್ನೆಗಳು ಮತ್ತು ಬೇಡಿಕೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ.

Advertisement
Advertisement