ಶನಿವಾರ, 24 ಅಕ್ಟೋಬರ್ 2026

ಎಸ್‌ಐಆರ್‌ ವಿರುದ್ಧ ಮಂಗಳೂರಿನಲ್ಲಿ ಧರಣಿ ಸತ್ಯಾಗ್ರಹ

ಮಂಗಳೂರು: ಎಸ್‌ಐಆರ್‌ ವಿರುದ್ಧ ಮಂಗಳೂರಿನ ಮಿನಿ ವಿಧಾನ ಸೌಧದ ಬಳಿ ಶುಕ್ರವಾರದಂದು ಸಮಾನ ಮನಸ್ಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಒಕ್ಕೂಟವಾದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ದಕ್ಷಿಣ ಕನ್ನಡ ಜಿಲ್ಲೆ ಇದರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಜಂತರ್‌ ಮಂತರ್‌ ಎಂಬ ಹೆಸರಿನಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಪ್ರಜಾಪ್ರಭುತ್ವ ಉಳಿದ ಆಂದೋಲನ ಸಂಚಾಲಕ ವಿಮೋದ್‌ ಮಸ್ಕರೇನಸ್‌, ಸಹ ಸಂಚಾಲಕ ಅನ್ವರ್‌ ಸಾದತ್‌, ಅತಾಉಲ್ಲಾ ಜೋಕಟ್ಟೆ, ಕಾಂಗ್ರೆಸ್‌ನ ನೀತಾ ಡಿಸೋಜಾ, ಶಾಹಿದಾ, ಅಶ್ರಫ್‌ ಅಡ್ಡೂರು, ಪ್ರಸೀದಾ ಮೊದಲಾದವರು ಪಾಲ್ಗೊಂಡಿದ್ದರು.