ಶನಿವಾರ, 24 ಅಕ್ಟೋಬರ್ 2026

ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಜಗಿದು ಜಗಿದು ತಿಂದ ಭೂಪ!

ಪ್ರಪಂಚದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅಂತೆಯೇ ಇಲ್ಲಿ ವ್ಯಕ್ತಿಯೊಬ್ಬ ಮೆಣಸಿನಕಾಯಿ ಬಜ್ಜಿ ತಿಂದಂತೆ ಹಲ್ಲಿಯನ್ನು ಸಲೀಸಾಗಿ ಅಗೆದು ತಿಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಹೊಸದುರ್ಗ ತಾಲೂಕು ದೊಡ್ಡ ಬ್ಯಾಲದಕೆರೆ ನಿವಾಸಿ ಉಮೇಶ್ ಹಲ್ಲಿ ತಿಂದು ಸುದ್ದಿಯಾಗಿದ್ದಾರೆ. ಅವರು ಸಾರ್ವಜನಿಕರ ಮುಂದೆ ಹಲ್ಲಿಯನ್ನು ಸಲೀಸಾಗಿ ತಿಂದಿದ್ದಾರೆ.

ಮದ್ಯ ಸೇವಿಸಿ, ನಶೆಯಲ್ಲಿ ಹಲ್ಲಿ ಸೇವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಹಲ್ಲಿ ತಿಂದರೆ ಅಸ್ವಸ್ಥರಾಗುತ್ತಾರೆ. ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಸಮಸ್ಯೆಯಾಗಬಹುದು ಎಂಬ ಮಾತುಗಳ ಮಧ್ಯೆ ಉಮೇಶ್ ಹಲ್ಲಿ ತಿಂದು ಏನೂ ಆಗದೆ ಅಚ್ಚರಿ ಮೂಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ