ಸೋಮವಾರ, 26 ಅಕ್ಟೋಬರ್ 2026
Trending

Mangaluru : ದ್ವಿತೀಯ PU ಫಲಿತಾಂಶ – ಸುಳ್ಯದ ಯುವಕ, ಎಕ್ಸ್ ಪರ್ಟ್ ಪಿ.ಯು ಕಾಲೇಜಿನ ಸಮನ್ಯು ಎಸ್. ಶೆಟ್ಟಿ ವಿಜ್ಞಾನದಲ್ಲಿ ದ.ಕ. ಜಿಲ್ಲೆಗೆ ಪ್ರಥಮ

Mangaluru : ಮಂಗಳೂರಿನ ಎಕ್ಸ್ ಪರ್ಟ್ ಪಿ.ಯು. ಕಾಲೇಜಿನ ವಿಜ್ಞಾನ ವಿದ್ಯಾರ್ಥಿ, ಸುಳ್ಯದ ಸುದೇಶ್ ಶೆಟ್ಟಿ ಮತ್ತು ಶ್ರೀಮತಿ ಅಕ್ಷತಾ ಎಸ್‌. ಶೆಟ್ಟಿ ದಂಪತಿಯ ಪುತ್ರ ಸಮನ್ಯು ಎಸ್.ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 598 ಅಂಕ ಗಳಿಸಿ ದ.ಕ. ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

Sponsored

ಇವರಿಗೆ ಹಿಂದಿಯಲ್ಲಿ 100 ಅಂಕ, ಇಂಗ್ಲಿಷ್‌ನಲ್ಲಿ 99 ಅಂಕ, ಫಿಸಿಕ್ಸ್‌ನಲ್ಲಿ 100, ಕೆಮೆಸ್ಟ್ರಿಯಲ್ಲಿ 99, ಬಯೋಲಜಿಯಲ್ಲಿ 100, ಗಣಿತದಲ್ಲಿ 100 ಹೀಗೆ 598 ಅಂಕ ಬಂದಿದ್ದು ಶೇ.99.67% ಫಲಿತಾಂಶ ಬಂದಿದೆ.

ಸಮನ್ಯುಗೆ ರಾಜ್ಯದಲ್ಲಿ ಪ್ರಥಮ ರ್ಯಾಂಕೇ ಅಥವಾ ದ್ವಿತೀಯ ರ್ಯಾಂಕೇ ಎಂಬುದು ಸಂಜೆ 6 ಗಂಟೆಗೆ ತಿಳಿಯಲಿದೆ