ಉಡುಪಿ: ಗಾಜಿನ ಬ್ಲಾಕ್ ಬಿದ್ದು ವ್ಯಕ್ತಿ ಸಾವು
ಉಡುಪಿ: ಖಾಸಗಿ ಗಾಜು ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್‌ಗಳನ್ನು ಅನ್‌ಲೋಡ್ ಮಾಡುತ್ತಿರುವ ವೇಳೆ ಸಂಭವಿಸಿದ ಅವಘಡದಲ್ಲಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ (48) ಅ.26 ರಂದು ಸಾವಿಗೀಡಾಗಿದ್ದಾರೆ.
Sponsoredಗಾಜಿನ ಬ್ಲಾಕ್ ಬಿದ್ದ ಪರಿಣಾಮ ಎದೆಯ ಭಾಗ ಜಜ್ಜಿ ಹೋಗಿದ್ದು, ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



