ಭಾನುವಾರ, 25 ಅಕ್ಟೋಬರ್ 2026
Trending

Gujarat : ಪ್ರಸಿದ್ಧ ದೇವಾಲಯದ ಶೌಚಾಲಯದಲ್ಲಿ ಇಬ್ಬರು ಕಾಲೇಜು ಯುವತಿಯರ ಶವ ಪತ್ತೆ – Chat GPT ನೀಡಿತು ಸುಳಿವು

Gujarat : ನಾಡಿನ ಪ್ರಸಿದ್ದ ದೇವಸ್ಥಾನದ ಶೌಚಾಲಯದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆಯಾದ ಘಟನೆ ಗುಜರಾತ್‍ನ ಸೂರತ್‌ನಲ್ಲಿ ನಡೆದಿದೆ. ಯುವತಿಯರು ನಾಪತ್ತೆಯಾದ ಬೆನ್ನಲ್ಲೇ ಹುಡುಕಾಟ ಆರಂಭಿಸಿದ ಪೊಲೀಸರು ಮೊಬೈಲ್ ಟವರ್ ಲೋಕೇಶನ್ ಆದರಿಸಿ ಪತ್ತೆ ಹಚ್ಚಿದ್ದಾರೆ. ಈ ಸಾವಿನ ಸುಳಿಯವನ್ನು ಯುವತಿಯರು ಬಳಸಿದ ಮೊಬೈಲ್‌ನಲ್ಲಿನ ಚಾಟ್‌ಜಿಪಿಟಿ ಎಐ ನೀಡಿದೆ.

Sponsored

ರೋಶ್ನಿ ಸಿರ್ಸಾತ್ ಹಾಗೂ ಜೋಶ್ನ ಚೌಧರಿ ಎಂಬ ಇಬ್ಬರು ವಿದ್ಯಾರ್ಥಿನಿಯರ ವಯಸ್ಸು 18 ಹಾಗೂ 20. ದಿಂಡೋಲಿ ವಲಯದ ನಿವಾಸಿಗಳಾಗಿರುವ ಈ ವಿದ್ಯಾರ್ಥಿನಿಯರು ಆತ್ಮೀಯ ಸ್ನೇಹಿತರಾಗಿದ್ದರು. ಇವರು ಶುಕ್ರವಾರ (ಮಾ.6) ಬೆಳಗ್ಗೆ ಕಾಲೇಜಿಗೆ ಮನೆಯಿಂದ ಹೊರಟಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಹಿಂತಿರುಗಲಿಲ್ಲ. ಪೊಲೀಸರಿಗೆ ದೂರು ನೀಡಿದ ನಂತರ ಹುಡುಕಾಟ ಆರಂಭಿಸಲಾಯಿತು. ಅವರ ಮೊಬೈಲ್ ಫೋನ್‌ಗಳು ದೇವಾಲಯ ಸಂಕೀರ್ಣದಲ್ಲಿ ಕೊನೆಯದಾಗಿ ಇದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದರು. ಶನಿವಾರವೂ (ಮಾ.7) ಹುಡುಕಾಟ ಮುಂದುವರಿದಾಗ ಆವರಣದಲ್ಲಿ ಅವರ ಸ್ಕೂಟರ್‌ಗಳು ನಿಂತಿರುವುದು ಕಂಡುಬಂದಿದೆ.

ಪೊಲೀಸರು ದೇವಸ್ಥಾನದ ಎಲ್ಲಾ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ದೇವಸ್ಥಾನದ ಶೌಚಾಲಯಕ್ಕೆ ತೆರಳಿರುವ ದೃಶ್ಯಗಳು ಲಭ್ಯವಾಗಿದೆ. ಆದರೆ ಶೌಚಾಲಯದಿಂದ ಈ ವಿದ್ಯಾರ್ಥಿಗಳು ಮರಳಿಲ್ಲ. ಹೀಗಾಗಿ ಪೊಲೀಸರು ಶೌಚಾಲಯದ ಬಳಿಕ ಬಂದು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಇಬ್ಬರು ಯುವತಿಯರು ಶವ ಪತ್ತೆಯಾಗಿದೆ.

ಈ ವೇಳೆ ಯುವತಿಯರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರ ದೇಹದ ಬಳಿ ಒಂದು ಸಿರಿಂಜ್ ಮತ್ತು ಮೂರು ಬಾಟಲಿ ವಿಷಕಾರಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಯುವತಿಯರು ಎಐ ಆಪ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಹುಡುಕಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಸಿರಿಂಜ್, ಮಾದಕ ವಸ್ತುಗಳ ಬಾಟಲಿಗಳು ಮತ್ತು ಯುವತಿಯರ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.