ಭಾನುವಾರ, 25 ಅಕ್ಟೋಬರ್ 2026

Sonu Gowda: ಸೋನು ಶ್ರೀನಿವಾಸ್ ಗೌಡ ಬಾಯ್ ಫ್ರೆಂಡ್ ನಿಧನ – ವಿಡಿಯೋ ಮಾಡಿ ಕಣ್ಣೀರಾದ ರಿಲ್ಸ್ರಾ ಣಿ

Sounu Gowda : ತನ್ನ ವಿಡಿಯೋಗಳ ಮುಖಾಂತರವೇ ನಾಡಿನಾದ್ಯಂತ ಫೇಮಸ್ ಆಗಿರುವ ಸೋಶಿಯಲ್ ಮೀಡಿಯಾ ಸ್ಟಾರ್, ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅವರ ಬಾಯ್ ಫ್ರೆಂಡ್ ನಿಧನರಾಗಿದ್ದಾರೆ. ಇದನ್ನು ಸ್ವತಹ ಅವರೇ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದು ಕಣ್ಣೀರು ಹಾಕಿದ್ದಾರೆ

Sponsored

ಇತ್ತೀಚೆಗಷ್ಟೇ ಸೋನು ಶ್ರೀನಿವಾಸ್ ಗೌಡ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಓರ್ವ ಹುಡುಗನ ಜೊತೆ ಸೋನು ಶ್ರೀನಿವಾಸ್ ಗೌಡ ಖುಷಿ ಖುಷಿಯಾಗಿ ಕಂಡು ಬಂದ ಫೋಟೋ ಇತ್ತು. ಅದಕ್ಕೆ, ‘ಮಿಸ್ ಯೂ ಎ ಲಾಟ್ ಬೇಬಿ ಮಾ’ ಎಂದು ಕ್ಯಾಪ್ಷನ್ ಕೊಟ್ಟಿದ್ದರು. RIP ಮತ್ತು ಲವರ್‌ ಎಂಬ ಹ್ಯಾಶ್‌ಟ್ಯಾಗ್ ಬಳಕೆ ಮಾಡಿದ್ದರು. ಅದನ್ನ ಕಂಡು ಸೋನು ಶ್ರೀನಿವಾಸ್ ಗೌಡ ಬಾಯ್‌ಫ್ರೆಂಡ್ ಸಾವನ್ನಪ್ಪಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿತ್ತು. ಅದಕ್ಕೀಗ ಸೋನು ಶ್ರೀನಿವಾಸ್ ಗೌಡ ಉತ್ತರ ನೀಡಿದ್ದಾರೆ.

Marriage AdMarriage AdSponsored

ಈ ಕುರಿತಾಗಿ ವಿಡಿಯೋ ಮಾಡಿರುವ ಅವರು ನನ್ನ ಫ್ರೆಂಡ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಾವು ರಿಲೇಶನ್‌ಶಿಪ್‌ನಲ್ಲಿದ್ದೆವು, ಅದೇನೋ ಆಗಿ ಬ್ರೇಕಪ್‌ ಆಯ್ತು. ಅದನ್ನು ಮರೆಯಬೇಕು ಎಂದುಕೊಂಡಿದ್ದೆ. ಆದರೆ ನನ್ನನ್ನು ಕಾಂಟ್ಯಾಕ್ಟ್‌ ಮಾಡೋಕೆ ಅವರು ತುಂಬ ಟ್ರೈ ಮಾಡಿದ್ದಾರೆ. ಆದರೆ ನನಗೆ ಸಿಗೋಕೆ, ಮಾತನಾಡೋಕೆ ಆಗಿಲ್ಲ. ಇಂದು ಅವರಿಲ್ಲ ಎಂದು ಪಶ್ಚಾತ್ತಾಪ ಆಗ್ತಿದೆ ಎಂದು ಸೋನು ಗೌಡ ಹೇಳಿದ್ದಾರೆ.

ಅಲ್ಲದೆ ಕಳೆದ ಎರಡು ತಿಂಗಳಿನಿಂದ ಅವರು ನನ್ನನ್ನು ಸಂಪರ್ಕಿಸಲು ಈ-ಮೇಲ್ ಮುಖಾಂತರ ಬಹಳ ಪ್ರಯತ್ನಿಸಿದ್ದರು. ಆದರೆ ನಾನು ಗಮನಿಸಿರಲಿಲ್ಲ. ನಾನು ಈ-ಮೇಲ್ ಓಪನ್ ಮಾಡೋದು ಕಡಿಮೆ. ಮಾರ್ಚ್ 20ರಂದು ಅವರು ಕೊನೆಯದಾಗಿ ಈ-ಮೇಲ್ ಮಾಡಿದ್ದರು. ಅದನ್ನ ನಾನು ನೋಡೇ ಇರಲಿಲ್ಲ. ಅದನ್ನು ಓದಿದಾಗ ನನಗೆ ಬಹಳ ನೋವಾಯಿತು” ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

ಕೊನೇ ಮೆಸೇಜ್‌ ಏನಾಗಿತ್ತು?

ನಾಳೆ ಇರ್ತೀನೋ ಇಲ್ವೋ ನನಗೆ ಗೊತ್ತಿಲ್ಲ, ನಿನಗೆ ಮೆಸೇಜ್‌, ಕಾಲ್‌ ಮಾಡಿ ಮಾತಾಡಬೇಕು ಎಂದರೂ ಕೂಡ ಆಗಲ್ಲ ಅನಿಸುತ್ತೆ. ನನಗೆ ಏನಾದರೂ ಆದರೆ ನೋಡೋಕೆ ಬರಬೇಡ, ಫೀಲ್‌ ಕೂಡ ಆಗಬೇಡ, ಮುಂದೆ ಜನ್ಮ ಅಂತಿದ್ರೆ ನನಗೆ ಸಿಗು, ಮಿಸ್‌ ಯು ಮುದ್ದು ಎಂದು ಅವರು ಮಾರ್ಚ್‌ 24 ನೇ ತಾರೀಖಿಗೆ ಮೇಲ್‌ ಮಾಡಿದ್ದಾರೆ. ಸಾವಿರ ಮೇಲ್‌ ಕಳಿಸಿದ್ರೂ ಕೂಡ, ಈ ಮೇಲ್‌ ನನಗೆ ಕಾಡ್ತಿದೆ ಎಂದು ಸೋನು ಗೌಡ ಹೇಳಿದ್ದಾರೆ.