ಕನ್ನಡ ಕಿರುತೆರೆಯ ʼಪ್ಯಾಟೆ ಮಂದಿ ಕಾಡಿಗೆ ಬಂದ್ರುʼ ರಿಯಾಲಿಟಿ ಶೋನ ಸೀಸನ್ 2 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪದ್ಮನಾಭ ಗೌಡ ಅವರು ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ಸಾವಿಗೀಡಾಗಿದ್ದಾರೆ. ಇವರಿಗೆ 44 ವರ್ಷ ವಯಸ್ಸಾಗಿತ್ತು.
ರಿಯಾಲಿಟಿ ಶೋ ಮಾತ್ರವಲ್ಲದೆ ಖಾಸಗಿ ಕನ್ನಡ ವಾಹಿನಿಗಳಲ್ಲಿ ನಿರೂಪಕರಾಗಿಯೂ ಹಾಗೂ ಗ್ಲಾಮರ್ ಲೋಕದಲ್ಲಿ ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ.
ಬೆಂಗಳೂರಿನ ಯಲಹಂಕದ ನಿವಾಸದಲ್ಲಿ ಪದ್ಮನಾಭ ಗೌಡ ಅವರ ನಿಧನ ಸಂಭವಿಸಿದೆ. ಪದ್ದು ಗೌಡ ಎಂದು ಖ್ಯಾತಿ ಪಡೆದಿರುವ ಇವರು ಪತ್ನಿ ಅಶ್ವಿನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.


