ಸೋಮವಾರ, 26 ಅಕ್ಟೋಬರ್ 2026
Trending

ಪುತ್ತೂರು: ಯುವಕ ಸಾವು, ವಿದ್ಯುತ್‌ ಅವಘಡ ಶಂಕೆ

ಪುತ್ತೂರು: ಯುವಕನೊಬ್ಬ ಮನೆಯಂಗಳದಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೆಮ್ಮಾಯಿ ಬಡಾವು ಎಂಬಲ್ಲಿ ನಡೆದಿದೆ. ಬಡಾವು ನಿವಾಸಿ ಮೆಡಿಕಲ್‌ ಉದ್ಯೋಗಿ ರಕ್ಷಿತ್‌ (29) ಮೃತಪಟ್ಟ ಯುವಕ. ವಾಹನ ತೊಳೆಯುತ್ತಿದ್ದ ಸಂದರ್ಭ ವಿದ್ಯುತ್‌ ಅವಘಡ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

Sponsored

ಮನೆಮಂದಿ ಹೊರಗಡೆ ಹೋಗಿದ್ದರಿಂದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ನೆರೆಯವರು ರಕ್ಷಿತ್‌ ಬಿದ್ದಿರುವುದನ್ನು ಗಮನಿಸಿ ಇತರರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Advertisement