ಮಂಗಳವಾರ, 27 ಅಕ್ಟೋಬರ್ 2026
Trending

North Korea: ಗಾಯಗೊಂಡ ಹೋರಾಟಗಾರ್ತಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ನಿರಾಕರಣೆ – 19ನೇ ವಯಸ್ಸಿಗೆ ಉಸಿರು ಚೆಲ್ಲಿದ ಯುವತಿ

North Korea : ಉತ್ತರ ಇರಾಕ್‌ನ ಕುರ್ದಿಶ್ ಪ್ರದೇಶದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಡೆಸಿದ ಡ್ರೋನ್ ದಾಳಿಯಲ್ಲಿ ‘ಕೋಮಲಾ’ ಪಕ್ಷದ ಯುವ ಹೋರಾಟಗಾರ್ತಿ ಗಝಲ್ ಮೋಲನ್ (19) ಗಾಯಗೊಂಡಿದ್ದು ಈ ಸಂದರ್ಭದಲ್ಲಿ ಅವರಿಗೆ ಆಸ್ಪತ್ರೆ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

Sponsored

ಕುರ್ದಿಶ್ ಸ್ವಾಯತ್ತತೆಗಾಗಿ ಹೋರಾಡುತ್ತಿರುವ ಪೆಶ್ಮೆರ್ಗಾ ಪಡೆಯ ಪ್ರಮುಖ ಸದಸ್ಯೆಯಾಗಿದ್ದರು. ಏಪ್ರಿಲ್ 14 ರಂದು ಇರಾನಿನ ಕುರ್ದಿಶ್ ವಿರೋಧ ಪಕ್ಷದವರ ಕುಟುಂಬಗಳು ವಾಸಿಸುತ್ತಿದ್ದ ಸುರ್ದಾಶ್‌ನ ಜನವಸತಿ ಪ್ರದೇಶದ ಮೇಲೆ ಈ ಡ್ರೋನ್ ದಾಳಿ ನಡೆದಿತ್ತು. ದಾಳಿಯಲ್ಲಿ ಗಾಯಗೊಂಡ ಗಝಲ್ ಅವರನ್ನು ತಕ್ಷಣವೇ ಶೋರ್ಶ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಅಲ್ಲಿ ಸರಿಯಾದ ಸೌಲಭ್ಯಗಳಿಲ್ಲದ ಕಾರಣ, ಅವರನ್ನು ಬಕ್ಷೀನ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಯಿತು.

Advertisement
Advertisement

ಬಕ್ಷೀನ್ ಆಸ್ಪತ್ರೆಯ ಸಿಬ್ಬಂದಿ ಗಝಲ್‌ಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ‘ಸಶಸ್ತ್ರ ಗುಂಪಿಗೆ ಸೇರಿದವರಿಗೆ ಚಿಕಿತ್ಸೆ ನೀಡಿದರೆ ನಮಗೆ ತೊಂದರೆಯಾಗುತ್ತದೆ’ ಎಂದು ಅವರು ಹೆದರಿದ್ದರು ಎಂದು ಗಝಲ್ ಜೊತೆಗಿದ್ದ ಸಾಮಾಜಿಕ ಕಾರ್ಯಕರ್ತೆ ಶಕೀಲಾ ಮಹ್ದಿಪನಾಹ್ ಆರೋಪಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ಒಪ್ಪಲಿಲ್ಲ. ಕೊನೆಗೆ ಅವರನ್ನು ಫಾರೂಕ್ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯುವಷ್ಟರಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು ಮತ್ತು ಅವರು ಕೊನೆಯುಸಿರೆಳೆದರು.

Advertisement