ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ರಾಜೇಶ್ ಬಲ್ಲಾಳ್ ನಿಧನ
ಮಂಗಳೂರು, ಆ.24: ಮಂಗಳೂರಿನ ಪ್ರಸಿದ್ಧ ವೈದ್ಯರಲ್ಲಿ ಒಬ್ಬರಾಗಿರುವ ಡಾ.ಸಿ.ಆರ್.ಬಲ್ಲಾಳ್ ಅವರ ಪುತ್ರ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರೊಫೆಸರ್ ಮತ್ತು ಜನರಲ್ ಸರ್ಜನ್ ಆಗಿದ್ದ ಡಾ.ರಾಜೇಶ್ ಬಲ್ಲಾಳ್ (60) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
Sponsoredದೇರಳಕಟ್ಟೆ ಕೆಎಸ್ ಹೆಗ್ಡೆ (ಕ್ಷೇಮ) ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಸರ್ಜರಿ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದ ಇವರು ತಮ್ಮದೇ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಕೆಲವು ತಿಂಗಳಿನಿಂದ ಲಿವರ್ ಸಂಬಂಧಪಟ್ಟ ಕಾಯಿಲೆಯಿಂದ ಆರೋಗ್ಯ ಬಿಗಡಾಯಿಸಿತ್ತು. ಅವರು ತಂದೆ ಪ್ರಸಿದ್ಧ ವೈದ್ಯ ಸಿ.ಆರ್.ಬಲ್ಲಾಳ್, ಪುತ್ರಿ, ಪತ್ನಿಯನ್ನು ಅಗಲಿದ್ದಾರೆ.




