ಸೋಮವಾರ, 26 ಅಕ್ಟೋಬರ್ 2026
Trending

ಮದುವೆ ನಿಶ್ಚಯವಾಗಿದ್ದ ಜೋಡಿ ಆತ್ಮಹ*ತ್ಯೆ

ಮದುವೆ ನಿಶ್ಚಯವಾಗಿದ್ದ ಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಡಿಸೆಂಬರ್‌ನಲ್ಲಿ ಇವರಿಬ್ಬರ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ ಎಸ್‌ಬಿಐ ಮಹಿಳಾ ಉದ್ಯೋಗಿ ಅನುಶ್ರೀ (26) ಹುಣಸೂರಿನ ಮನೆಯಲ್ಲೇ ನೇಣು ಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿದ್ದಾರೆ. ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದನ್‌ ಅವರ ಪುತ್ರಿ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

Sponsored

ಈ ವಿಷಯ ತಿಳಿದ ಕೆಲವೇ ಗಂಟೆಯಲ್ಲಿ ಸ್ವಂತ ಊರಾದ ಇರಟ್ಟಿಯಲ್ಲಿ ಅನುಶ್ರೀ ಅವರನ್ನು ಮದುವೆಯಾಗಬೇಕಿದ್ದ ಯುವಕ ಅಮಲ್‌ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಸ್‌ ಬಿ ಐ ನಲ್ಲಿ ಉದ್ಯೋಗದಲ್ಲಿದ್ದ ಅನುಶ್ರೀ ತರಬೇತಿ ಸಮಯದಲ್ಲಿ ಪರಿಚಯವಾಗಿದ್ದ ಕೇರಳದ ಎರ್ನಾಕುಲಂ ಎಸ್‌ ಬಿ ಐ ಉದ್ಯೋಗಿ ಅಮಲ್‌ ಅವರನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.