ಒಂದೇ ಬಾರಿಗೆ 50 ಮೊಟ್ಟೆಗಳನ್ನು ತಿನ್ನುವ ಬೆಟ್ಟಿಂಗ್ ನಲ್ಲಿ ಭಾಗವಹಿಸಿದ್ದ 42 ವರ್ಷದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ.
Sponsoredಉತ್ತರ ಪ್ರದೇಶದ ಜೌನ್‌ಪುರದ ಬಿಬಿಗಂಜ್ ಬಜಾರ್ ಪ್ರದೇಶದಲ್ಲಿ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದಿತ್ತು. ಬಳಿಕ ಯಾರು ಮೊದಲು 50 ಮೊಟ್ಟೆ ತಿನ್ನುತ್ತಾರೆ ಎಂಬುದರ ಮೇಲೆ 2,000 ರೂಪಾಯಿ ಪಂತ ಕಟ್ಟಲಾಗಿತ್ತು. ಈ ವೇಳೆ 42 ವರ್ಷದ ಸುಭಾಷ್ ಯಾದವ್ ಮೊಟ್ಟೆ ತಿನ್ನಲು ಆರಂಭಿಸಿದ್ದರು. ಅವರು 42ನೇ ಮೊಟ್ಟೆ ತಿಂದ ಬಳಿಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಯಿತಾದರೂ, ಕೆಲವು ಗಂಟೆಗಳ ಬಳಿಕ ಅವರು ಮೃತಪಟ್ಟಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯರ ಪ್ರಾಥಮಿಕ ಅಭಿಪ್ರಾಯದ ಪ್ರಕಾರ, ಅತಿಯಾದ ಆಹಾರ ಸೇವನೆಯಿಂದ ದೇಹದ ಮೇಲೆ ಗಂಭೀರ ಒತ್ತಡ ಉಂಟಾಗಿರಬಹುದು. ಆದರೆ ಕುಟುಂಬದ ಸದಸ್ಯರು ಈ ಕಾರಣವನ್ನು ಒಪ್ಪಿಲ್ಲ ಎಂದು ವರದಿಗಳು ತಿಳಿಸಿವೆ. ಮರಣದ ನಿಖರ ಕಾರಣದ ಬಗ್ಗೆ ಹೆಚ್ಚಿನ ವೈದ್ಯಕೀಯ ಪರಿಶೀಲನೆ ಅಗತ್ಯವಿದೆ ಎಂದು ಹೇಳಲಾಗಿದೆ.




