ಸೋಮವಾರ, 26 ಅಕ್ಟೋಬರ್ 2026
Trending

Mumbai : ಮುಸ್ಲಿಂ ಯುವಕನ ಪ್ರೀತಿಯಲ್ಲಿ ನರಕ ಕಂಡು ಬದುಕು ಚೆಲ್ಲಿದ ಹಿಂದೂ ಯುವತಿ!!

Mumbai: ದಂತ ವೈದ್ಯೆಯಾಗಬೇಕೆಂಬ ಕನಸು ಹೊತ್ತು ಮುಂಬೈನ 24ರ ಹರೆಯದ ಹಿಂದೂ ವಿದ್ಯಾರ್ಥಿನಿ ಸ್ತುತಿ ಸೋನಾವಾನೆ ಮುಸ್ಲಿಂ ಯುವಕನ ಪ್ರೀತಿಯ ಬಲೆಗೆ ಬಿದ್ದು, ನರಕ ಯಾತನೆಯನ್ನು ಅನುಭವಿಸಿ ಇದೀಗ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.

Sponsored

ಸ್ತುತಿ ಸೋನಾವಾನೆ ಬಾಯ್‌ಫ್ರೆಂಡ್ ಮೊಹಮ್ಮದ್ ಖಾನ್ ಎಂದು ಆಕೆ ಬರೆದ ಡೆತ್ ನೋಟ್‌ನಲ್ಲಿ ಹೇಳಿಕೊಂಡಿದ್ದಾಳೆ. ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ಮೊಹಮ್ಮದ್ ಖಾನ್ ಜೊತೆ ಪ್ರೀತಿ ಶುರುವಾಗಿತ್ತು. ಆದರೆ ಮೊಹಮ್ಮದ್ ಖಾನ್ ಕಿರುಕುಳ, ಮಾನಸಿಕ ಹಿಂಸೆ, ಅಪಮಾನಗಳಿಂದ ಬೇಸತ್ತ ಸ್ತುತಿ ಸೊನವಾನೆ ದುರಂತ ಅಂತ್ಯಕಂಡಿದ್ದಾಳೆ. ತನ್ನ ಆರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಗೆಳೆಯ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ. ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.

ಮುಂಬೈನ ಆಂಟೋಪ್ ಹಿಲ್ ನೆರೆಹೊರೆಯಲ್ಲಿ ಸ್ತುತಿ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದಳು. ಬೆಳಗ್ಗೆ 11 ಗಂಟೆಯವರೆಗೆ ಅವಳು ತನ್ನ ಕೋಣೆಯಿಂದ ಹೊರಬರದಿದ್ದಾಗ, ಅವಳ ಪೋಷಕರು ಅವಳಿಗೆ ಕರೆ ಮಾಡಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ಅವಳ ಕೋಣೆಯ ಬಾಗಿಲು ಒಡೆದು ನೋಡಿದಾಗ, ಆಕೆ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.

ವೈದ್ಯ ವಿದ್ಯಾರ್ಥಿನಿ ಸ್ತುತಿ ಸೊನವಾನೆ ಮುಂಬೈನ ಅಂಟೋಪ್ ಹಿಲ್ ವಲಯದ ನಿವಾಸಿ. ಡೆಂಟಲ್ ಸರ್ಜರಿ ವಿದ್ಯಾರ್ಥಿನಿ ಸ್ತುತಿ ಡೇಟಿಂಗ್ ಆಯಪ್ ಮೂಲಕ ಮೊಹಮ್ಮದ್ ಖಾನ್ ಪರಿಚಯವಾಗಿದ್ದ. ಮೊಹಮ್ಮದ್ ಖಾನ್ ಬಿತ್ತು ಬಕ್ರಾ ಎಂದು ಮೋಸದ ಪ್ರೀತಿ ನಾಟಕವಾಡಿದ್ದ. ಡೆಂಟಲ್ ಕಲಿಯುತ್ತಿದ್ದ ಇತರ ಸಹಪಾಠಿಗಳು ಸ್ತುತಿಗೆ ಈ ಪ್ರೀತಿ ಕುರಿತು ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಸಂದರ್ಭಗಳಲ್ಲೂ ಸ್ತುತಿ, ನನ್ನ ಮೊಹಮ್ಮದ್ ಖಾನ್ ಇತರರಂತೆ ಅಲ್ಲ, ಆತ ನನ್ನನ್ನು ಅತೀಯಾಗಿ ಪ್ರೀತಿಸುತ್ತಿದ್ದಾನೆ. ನನಗೆ ಮೋಸ ಮಾಡಲ್ಲ, ನನ್ನ ಮನಸ್ಸು ನೋಯಿಸಲು ಅವಕಾಶ ನೀಡುವುದಿಲ್ಲ ಎಂದಿದ್ದಳು. ಪದೇ ಪದೇ ಈ ರೀತಿ ಹೇಳಿ ಸಹಪಾಠಿಗಳು, ಗೆಳೆಯರಿಗೆ ಹೇಳಿದ್ದಳು. ಯಾವಾಗ ರಿಲೇಶನ್‌ಶಿಪ್ ಟಾಕ್ಸಿಕ್ ರೂಪ ಪಡೆದುಕೊಂಡಿತ್ತೋ, ಸ್ತುತಿ ಒಬ್ಬಂಟಿಯಾಗಿದ್ದಳು. ಅತ್ತ ಗೆಳೆಯರು, ಸಹಪಾಠಿಗಳ ಮುಂದೆ ನೋವು ಹೇಳಿಕೊಳ್ಳಲು ಆಗಲಿಲ್ಲ. ಇತ್ತ ತಾನು ಮೊಹಮ್ಮದ್ ಖಾನ್ ಕೈಯಲ್ಲಿ ಸಿಲುಕಿ, ದೆಹಲಿ ಶ್ರದ್ಧವಾಕಾರ್ ರೀತಿ ಫ್ರಿಡ್ಜ್‌ನಲ್ಲಿ ಹಲವು ತುಂಡು ತುಂಡುಗಳಾಗಿ ಪತ್ತೆಯಾಗಬಾರದು ಎಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.