ಸೋಮವಾರ, 26 ಅಕ್ಟೋಬರ್ 2026
Trending

4 ವರ್ಷ ಲಿವ್‌-ಇನ್‌ನಲ್ಲಿದ್ದು, ಬೇರೆಯವಳ ಜೊತೆ ಮದುವೆ: ಮಹಿಳೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆ

ಲಕ್ನೋ: ನಾಲ್ಕು ವರ್ಷ ನನ್ನ ಜೊತೆ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಈಗ ಬೇರೊಬ್ಬಳನ್ನು ವಿವಾಹವಾಗಿರುವುದಾಗಿ ಆರೋಪಿಸಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.

Sponsored

ತಾಜ್‌ಗಂಜ್‌ ಪೊಲೀಸ್‌ ಠಾಣೆಯ ಜೆ.ವಿ.ಗೌತಮ್‌ ನಾಲ್ಕು ವರ್ಷಗಳಿಂದ ಮದುವೆಯಾಗುವ ಭರವಸೆ ನೀಡಿ, ನಂತರ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಿ, ಇದೀಗ ಇನ್ನೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸುತ್ತಿದ್ದಾನೆ ಎಂದು ಆತ್ಮಹತ್ಯೆಗೂ ಮುನ್ನ ಮಹಿಳೆ ವಿಡಿಯೋ ಮಾಡಿಟ್ಟಿದ್ದಾರೆ.

ಕಾನ್‌ಸ್ಟೇಬಲ್‌ ಕುಟುಂಬದವರೂ ಮದುವೆಗೆ ಅವಕಾಶ ನೀಡುವುದಿಲ್ಲ, ಅವನ ಕುಟುಂಬ ನನಗೆ ಮಾನಸಿಕವಾಗಿ ಹಿಂಸೆ ತೊಂದರೆ ನೀಡಿದೆ ಎಂದು ಮಹಿಳೆ ಹೇಳಿ, ಆತ್ಮಹತ್ಯೆಗೂ ಮುನ್ನ ಮಹಿಳಾ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಮಹಿಳೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ, ಪ್ರಧಾನಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿದ್ದು, ತಾನು ಬದುಕಿದ್ದಾಗ ನ್ಯಾಯ ದೊರಕಿಲ್ಲ ತನ್ನ ಮರಣದ ನಂತರ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಡಿಯೋ ಬಂದಿದ್ದು, ಕಾನ್‌ಸ್ಟೇಬಲ್‌ ಜೆ.ವಿ.ಗೌತಮ್‌ ಅವರನ್ನು ಅಮಾನತು ಮಾಡಲಾಗಿದೆ.