ಭಾನುವಾರ, 25 ಅಕ್ಟೋಬರ್ 2026

ಬಿ.ಸಿ.ರೋಡ್‌ನಲ್ಲಿ ಯುವತಿ ಹತ್ಯೆ ಪ್ರಕರಣ: ಆರೋಪಿ ಬಂಧನ

ಬಂಟ್ವಾಳ: ಬಿಸಿರೋಡಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆ ಮಾಡಿ ಪರಾರಿಯಾಗಿದ್ದ ಬೆಳ್ತಂಗಡಿ ಓಡಿಲ್ನಾಲ ನಿವಾಸಿ ಚೇತನ್‌ನನ್ನು ಬಂಟ್ವಾಳ ಪೊಲೀಸರು ಬಂಧನ ಮಾಡಿರುವ ಕುರಿತು ವರದಿಯಾಗಿದೆ.

Sponsored

ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಕಾರ್ಯಾಚರಣೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Marriage AdMarriage AdSponsored

ಕಳೆದ ನಾಲ್ಕು ವರ್ಷದ ಹಿಂದೆ ಇವರಿಬ್ಬರು ಪ್ರೀತಿ ಮಾಡುತ್ತಿದ್ದು, ಅನಂತರ ಅವರ ಪ್ರೀತಿ ಅಂತ್ಯವಾಗಿತ್ತು ಎನ್ನಲಾಗಿದೆ. ಈ ಕೋಪದಿಂದ ಯುವತಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.