ಬಂಟ್ವಾಳ: ಬಿಸಿರೋಡ್‌ನಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಬಜರಂಗದಳ ಸಂಘಟನೆಯ ಕುರಿತು ಅಪಪ್ರಚಾರ ಮಾಡಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಈ ಆರೋಪದಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಉಪಾಧ್ಯಕ್ಷ ಕೇಶವ ದೈಪಾಲ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sponsoredಎಫ್‌ಐಆರ್‌ನಲ್ಲಿ Instagram ಖಾತೆ troll_master_,Yuva Belthangady ವಾಟ್ಸಪ್ ಗುಂಪು, ʼPadmaraj Pari’ ಹೆಸರಿನ ಎರಡು ವಾಟ್ಸಪ್ ಗುಂಪುಗಳು, ʼYuva Congress Belthangady’ ವಾಟ್ಸಪ್ ಗುಂಪು ಹಾಗೂ ʼFacts and Justice’ ವಾಟ್ಸಪ್ ಗುಂಪು ಸೇರಿ ಒಟ್ಟು ಆರು ಸಾಮಾಜಿಕ ಜಾಲತಾಣ ಖಾತೆ/ಗುಂಪುಗಳನ್ನು ಆರೋಪಿಗಳಾಗ ಉಲ್ಲೇಖ ಮಾಡಲಾಗಿದೆ.
ಪ್ರಕರಣ ದಾಖಲು ಮಾಡಿರುವ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳ ಮೂಲಕ ಅವುಗಳನ್ನು ಹಂಚಿಕೊಂಡವರ ವಿವರ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.




