ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಮೊಮ್ಮಗಳು ಹಾಗೂ ಮಾಜಿ ಕೇಂದ್ರ ಸಚಿವ ಎಂ ಕೆ ಅಳಗಿರಿ ಅವರ ಮಗಳು ಕಯಲ್ವಿಳಿ ಅಳಗಿರಿಯನ್ನು ಚೆನ್ನೈ ಪೊಲೀಸರು ಬಂಧನ ಮಾಡಿದ್ದಾರೆ.
ಚೆನ್ನೈನ ಅಡ್ಯಾರ್ನಲ್ಲಿರುವ ಕಯಲ್ವಿಳಿ ಮಾಲೀಕತ್ವದ ಕಟ್ಟಡದಲ್ಲಿ ಎಸ್ಬಿಐ ಶಾಖೆ ಕೆಲಸ ನಿರ್ವಹಿಸುತ್ತಿದ್ದು, ಕಟ್ಟಡದ ಲಿಫ್ಟ್ನಲ್ಲಿ ದೋಷಷಿತ್ತು. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಈ ಮೋದಲೇ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುವವರಿಗೆ ಮಾಹಿತಿ ನೀಡಿದ್ದರು. ಕಟ್ಟಡಕ್ಕೆ ಕಯಲ್ವಿಳಿ ಬಂದಿದ್ದು, ಮ್ಯಾನೇಜರ್ ಲಿಫ್ಟ್ ಸಮಸ್ಯೆಯನ್ನು ನೇರವಾಗಿ ಅವರ ಗಮನಕ್ಕೆ ತಂದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಕಯಲ್ವಿಳಿ ಮ್ಯಾನೇಜರ್ಗೆ ಕಪಾಳಮೋಕ್ಷ ಮಾಡಿದ್ದರು.



